ಮಂಚನಬೆಲೆ ಕಾಲನಿಯ ಮದ್ಯದಂಗಡಿ ಸ್ಥಳಾಂತರಕ್ಕೆ ಪಟ್ಟು

ಮಾಗಡಿ ತಾಲೂಕು ಮಂಚನಬೆಲೆ ಜಲಾಶಯ ಕಾಲನಿಯಲ್ಲಿರುವ ಮದ್ಯದ ಅಂಗಡಿಯನ್ನು ಸ್ಥಳಾಂತರಿಸುವಂತೆ ಸ್ಥಳೀಯರು ಅಬಕಾರಿ ಅಧಿಕಾರಿಗೆ ಮನವಿ ಸಲ್ಲಿಸಿದರು. ಸಂಜೀವಿನಿ ಒಕ್ಕೂಟದ ಕಾರ್ಯಕರ್ತೆ ವಾರಿಜಾ, ಸ್ತ್ರೀ ಶಕ್ತಿ ಸಂಘದ ಜಯಮ್ಮ, ಗೌರಮ್ಮ, ಮಾದೇವಿ, ಭಾಗ್ಯಮ್ಮ, ಉಮಾ, ಸಣ್ಣಮ್ಮ, ಅನೀನಾಭಿ, ರಮೇಶ್ ಇತರರು ಇದ್ದರು.
ಮಾಗಡಿ ತಾಲೂಕು ಮಂಚನಬೆಲೆ ಜಲಾಶಯ ಕಾಲನಿಯಲ್ಲಿರುವ ಮದ್ಯದ ಅಂಗಡಿಯನ್ನು ಸ್ಥಳಾಂತರಿಸುವಂತೆ ಸ್ಥಳೀಯರು ಅಬಕಾರಿ ಅಧಿಕಾರಿಗೆ ಮನವಿ ಸಲ್ಲಿಸಿದರು. ಸಂಜೀವಿನಿ ಒಕ್ಕೂಟದ ಕಾರ್ಯಕರ್ತೆ ವಾರಿಜಾ, ಸ್ತ್ರೀ ಶಕ್ತಿ ಸಂಘದ ಜಯಮ್ಮ, ಗೌರಮ್ಮ, ಮಾದೇವಿ, ಭಾಗ್ಯಮ್ಮ, ಉಮಾ, ಸಣ್ಣಮ್ಮ, ಅನೀನಾಭಿ, ರಮೇಶ್ ಇತರರು ಇದ್ದರು.
Published on
ಮಾಗಡಿ: ಮಂಚನಬೆಲೆ ಜಲಾಶಯ ಕಾಲನಿಯಲ್ಲಿರುವ ಮದ್ಯದ ಅಂಗಡಿ ಸ್ಥಳಾಂತರಿಸಲು ಒತ್ತಾಯಿಸಿ ಪಟ್ಟಣದ ಅಬಕಾರಿ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಸಲ್ಲಿಸಿದರು.
ಸೀಶಕ್ತಿ, ಸಂಜೀವಿನಿ ಒಕ್ಕೂಟದ ಎಂಬಿಕೆ ಕಾರ್ಯಕರ್ತೆ ವಾರಿಜಾ ಮಾತನಾಡಿ, ವಸತಿ ಪ್ರದೇಶ ಹಾಗೂ ದಲಿತ ಕಾಲನಿ ಬಳಿ ಮದ್ಯದಂಗಡಿ ಇರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಮಂಚನಬೆಲೆ ಜಲಾಶಯ ವೀಕ್ಷಣೆಗೆಂದು ಬರುವವರು ಮದ್ಯಸೇವಿಸಲು ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಿ ಗಲಾಟೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಹೊರಗೆ ಓಡಾಡಲು ಭಯಪಡುವಂತಾಗಿದೆ ಎಂದು ಆರೋಪಿಸಿದರು.
ಗ್ರಾಮದ ಕೆಲ ಅಂಗಡಿಗಳು ಮತ್ತು ಮನೆಗಳಲ್ಲಿಯೂ ಅಕ್ರಮವಾಗಿ ಬೆಳಗ್ಗಿನಿಂದಲೇ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಮದ್ಯದ ಅಂಗಡಿಯನ್ನು ತೆರವುಗೊಳಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಿಸಿದವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಶಾಶ್ವತ ಕ್ರಮ ಕೈಗೊಂಡಿಲ್ಲ. ಕೇವಲ ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಗ್ರಾಪಂ ಮಾಜಿ ಸದಸ್ಯ ಉಮೇಶ್ ಮಾತನಾಡಿ, ಈ ಬಗ್ಗೆ ಎರಡು ತಿಂಗಳ ಹಿಂದೆ ಸಿವಿಲ್ ನ್ಯಾಯಾಧೀಶರು, ತಹಸೀಲ್ದಾರರು ಹಾಗೂ ಆಡಳಿತ ಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈಗಿನ ಮದ್ಯದಂಗಡಿಯ 270ಮೀ ವ್ಯಾಪ್ತಿಯಲ್ಲೇ ಶಾಲೆ ಹಾಗೂ ಚರ್ಚ್ ಇದೆ. ಈ ಪ್ರದೇಶದಲ್ಲಿ ಸುಮಾರು 145 ಮನೆಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಎಸ್ಸಿ, ಎಸ್ಟಿ ಕುಟುಂಬಗಳಿವೆ. ಆದರೆ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಇಲ್ಲಿ ಎಸ್ಸಿ, ಎಸ್ಟಿ ಜನಾಂಗದವರು ಲಭ್ಯವಿಲ್ಲ ಎಂಬ ಸುಳ್ಳು ವರದಿ ನೀಡಿದ್ದಾರೆ. ಈ ಬಗ್ಗೆ ಅಬಕಾರಿ ಡಿಸಿ ಅವರ ಗಮನಕ್ಕೆ ತಂದರೂ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವ ಎಚ್.ಸಿ. ಬಾಲಕೃಷ್ಣ ಬಳಿ ಗ್ರಾಮದ ನಿಯೋಗ ತೆರಳಿ ಸಮಸ್ಯೆ ವಿವರಿಸಿದಾಗ
, ಸಚಿವರೇ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದರು. ಸಚಿವರ ನಿರ್ದೇಶನವಿದ್ದರೂ ವಿಳಂಬ ಮಾಡಿ ಅಧಿಕಾರಿಗಳು ಇತ್ತೀಚೆಗೆ ರಾತ್ರಿ 8 ಗಂಟೆ ವೇಳೆಗೆ ಬಂದು ಏಕಾಏಕಿ ಮಹಜರು ಮಾಡಲು ಮುಂದಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.
"

ಮದ್ಯದಂಗಡಿಯನ್ನು ಬೇರೆಡೆ ಸ್ಥಳಾಂತರಿಸಲು ಕಾನೂನು ಕ್ರಮ ಕೈಗೊಳ್ಳುವಂತೆ ಇಒ, ಪಿಡಿಒ, ತಹಸೀಲ್ದಾರ್‌ಗೆ ಪತ್ರಬರೆಯಲಾಗಿದ್ದು, ಸಮಸ್ಯೆ ಬಗ್ಗೆ ಈಗಾಗಲೇ ನೋಟಿಸ್ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net