ಕುರಿ ಮೈ ತೊಳೆಯಲು ಹೋದ ದಂಪತಿ ನೀರು ಪಾಲು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಕುರಿ ಮೈ ತೊಳೆಯಲು ಹೋಗಿದ್ದ ದಂಪತಿ
  • ರಾಮನಗರ ತಾಲೂಕಿನ ಗುಂಗರ ಹಳ್ಳಿ ಗ್ರಾಮ
  • ಆಳವಾದ ಕರೆಯಲ್ಲಿ ಮುಳುಗಿ ಸಾವು
ಗ್ರಾಮದ ಲಕ್ಷ್ಮಣ (71) ಮತ್ತು ಜಯಮ್ಮ (65) ಮೃತಪಟ್ಟ ವೃದ್ಧ ದಂಪತಿ.  ಇಬ್ಬರೂ ಗುರುವಾರ ಮಧ್ಯಾಹ್ನ ತಾವು ಸಾಕಿದ್ದ ಕುರಿಗಳನ್ನು ಮೇಯಲು ಬಿಟ್ಟು, ನಂತರ ಪಕ್ಕದಲ್ಲಿಯೇ ಇದ್ದ ಕೆೆರೆಗೆ ಮೈ ತೊಳೆಯಲು ಮುಂದಾಗಿದ್ದಾರೆ. ಈ ವೇಳೆ ಆಳದವಾದ ನೀರಿನಲ್ಲಿ ಮುಳುಗಿ ಇಬ್ಬರೂ ಮೃತಪಟ್ಟಿದ್ದಾರೆ. 
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ತೆರಳಿದ್ದು, ಕರೆಯಲ್ಲಿ ಮುಳಿಗಿರುವ ದಂಪತಿ ಮೃತ ದೇಹಕ್ಕಾಗಿ ಶೋಧಕಾರ್ಯ ಕೈಗೊಂಡಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net