ವರ್ಷದ 365 ದಿನವೂ ರೇಷ್ಮೆ ಬೆಳೆಯಲ್ಲಿ ತೊಡಗಿಕೊಂಡಿರುವ ಚಂದ್ರಶೇಖರ್, ಎರಡು ಬ್ಯಾಚ್‌ನಲ್ಲಿ ಒಂದು ಬಾರಿಗೆ 60, 80, 100 ಮೊಟ್ಟೆಯಂತೆ ರೇಷ್ಮೆ ಬೆಳೆಯುತ್ತಿದ್ದಾರೆ. ಒಂದೂವರೆ ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆ ಇದ್ದು, ಉಳಿದಂತೆ ಮಾವು- ತೆಂಗು 4 ಎಕರೆ ಪ್ರದೇಶದಲ್ಲಿದೆ. 20 ಗುಂಟೆಯಲ್ಲಿ ರಾಗಿ, ಮಾವು, ತೆಂಗಿನತೋಟದಲ್ಲಿ ಉಳಿದಂತೆ ಜೋಳ, ಜಾನುವಾರು ಮೇವನ್ನು ಬೆಳೆಯುತ್ತಿದ್ದಾರೆ. ಇನ್ನುಳಿದ ಖಾಲಿ ಜಾಗದಲ್ಲಿ ಹುರುಳಿ, ಮನೆ ಬಳಕೆಗೆ ಸೊಪ್ಪು, ತರಕಾರಿ ಬೆಳೆ ಬೆಳೆಯುತ್ತಿದ್ದಾರೆ.