ಬಿಸ್ಕೆಟ್​ ಬಾಕ್ಸ್​ ಕದ್ದವರ ಬಂಧನ

ಬಿಸ್ಕೆಟ್​ ಕಂಪನಿಯ ವೇರ್​ಹೌಸ್​ನಿಂದ ಕಳವು ಮಾಡಲಾಗಿದ್ದ ಬಿಸ್ಕೆಟ್​ ಬಾಕ್ಸ್​ಗಳನ್ನು ಬಿಡದಿ ಪೊಲೀಸ್​ ಠಾಣೆಯಲ್ಲಿ ವಾರಸುದಾರಿಗೆ ಹಿಂತಿರುಗಿಸಿದರು.
ಬಿಸ್ಕೆಟ್​ ಕಂಪನಿಯ ವೇರ್​ಹೌಸ್​ನಿಂದ ಕಳವು ಮಾಡಲಾಗಿದ್ದ ಬಿಸ್ಕೆಟ್​ ಬಾಕ್ಸ್​ಗಳನ್ನು ಬಿಡದಿ ಪೊಲೀಸ್​ ಠಾಣೆಯಲ್ಲಿ ವಾರಸುದಾರಿಗೆ ಹಿಂತಿರುಗಿಸಿದರು.
Published on
ಬಿಡದಿ: ಕಂಪನಿಯೊಂದರ ಬಿಸ್ಕೆಟ್​ ಬಾಕ್ಸ್​ಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳ ಪೈಕಿ ಒಬ್ಬನನ್ನು ಬಿಡದಿ ಪೊಲೀಸರು ಬಂಧಿಸಿದ್ದು, ಒಂದು ಲಕ್ಷ ರೂ. ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ.
ಚಾಲಕ ದೇವರಾಜ್​ ಎಂಬಾತನನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಶಶಿಕುಮಾರ್​ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಬ್ಬನಕುಪ್ಪೆ ಗ್ರಾಮದ ಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯ ವೇರ್​ಹೌಸ್​ನಿಂದ ಎರಡು ವಾಹನಗಳಲ್ಲಿ 7 ಲಕ್ಷ ರೂ. ಮೌಲ್ಯದ ಬಿಸ್ಕೆಟ್​ ಬಾಕ್ಸ್​ಗಳನ್ನು ಲೋಡ್​ ಮಾಡಿಕೊಂಡು ಹೊಸಕೋಟೆಗೆ ಹೋಗಿದ್ದರು.
ಆದರೆ, ನಿಗದಿತ ಸ್ಥಳದಲ್ಲಿ ಅನ್​ ಲೋಡ್​ ಮಾಡದೆ ಬಿಸ್ಕೆಟ್​ ಬಾಕ್ಸ್​ಗಳನ್ನು ಬೇರೊಂದು ವಾಹನದಲ್ಲಿ ತುಂಬಿಕೊಂಡು ಹೊಸಕೋಟೆ ಬಳಿ ವಾಹನಗಳನ್ನು ಬಿಟ್ಟು ಹೋಗಿದ್ದರು. ಈ ಬಗ್ಗೆ ಬಿಡದಿ ಪೊಲೀಸ್​ ಠಾಣೆಯಲ್ಲಿ ಡಿ.6ರಂದು ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಬಿಡದಿ ಠಾಣೆ ಎಸ್​ಐ ಕೇಶವಮೂರ್ತಿ, ಸಿಬ್ಬಂದಿ ಅನ್ವರ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net