

ಪ್ರಮುಖ ಮುಖ್ಯಾಂಶಗಳು
ರಾಮನಗರ
ಹುಟ್ಟಿದ ದಿನ ಎನ್ನುವುದು ಇಂದು ಹಬ್ಬಗಳಂತೆ ಪ್ರತಿಯೊಬ್ಬರ ಜೀವನದ ಪ್ರಮುಖಆಚರಣೆ ಆಗಿಬಿಟ್ಟಿದೆ. ಪ್ರೀತಿ ಪಾತ್ರರ ಜನ್ಮದಿನದ ಜತೆಗೆ ಇಷ್ಟದ ವಾಹನ, ಸಾಕು ಪ್ರಾಣಿಗಳು... ಹೀಗೆ,ಎಲ್ಲದಕ್ಕೂ ಸಂಭ್ರಮಿಸಲಾಗುತ್ತಿದೆ. ಆದರೆ, ರಾಮನಗರ ಪ್ರಗತಿಪರ ರೈತರೊಬ್ಬರು ಪೂರ್ವಿಕರ ಕಾಲದಿಂದಲೂಕುಟುಂಬದ ಆರ್ಥಿಕ ಶಕ್ತಿಯಾಗಿರುವ ಮರ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅದರ ಹುಟ್ಟುಹಬ್ಬ ಆಚರಿಸುವಮೂಲಕ ಸಂಭ್ರಮಿಸಿದ್ದಾರೆ.
ಹೌದು... ರಾಮನಗರ ತಾಲೂಕು ಬಿಳಗುಂಬ ಗ್ರಾಮದ ರೈತ ವಾಸು ಎಂಬುವವರು ಜಮೀನಿನಲ್ಲಿರುವಬೃಹತ್ ಗಾತ್ರದ ಮಲಗೋಬ ಮಾವಿನ ತಳಿಯ ಮರಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರ ತೋಟದಲ್ಲಿಮರವನ್ನು ಹೂವುಗಳಿಂದ ಸಿಂಗರಿಸಿ, ಬಾಳೆಕಂದುಗಳನ್ನು ಕಟ್ಟಿ ಅದರ ಮುಂಭಾಗದಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮದಿಂದ ಹುಟ್ಟುಹಬ್ಬಆಚರಿಸಲಾಯಿತು. ಇದರ ಜತೆಗೆ ವಿಶೇಷ ಪೂಜೆ ಮತ್ತು ಸಹಭೋಜನ ಹಮ್ಮಿಕೊಳ್ಳಲಾಗಿತ್ತು.
ವಾಸು ಅವರ ತಾತ ಸಿದ್ದೇಗೌಡರು ಜಮೀನಿನಲ್ಲಿ ಹಲವಾರು ಮಾವಿನ ಸಸಿಗಳನ್ನುನೆಟ್ಟಿದ್ದರು. ನಂತರ ಇವರ ತಂದೆ ಚನ್ನಪ್ಪ ಈ ಮರಗಳನ್ನು ಪೋಷಿಸಿಕೊಂಡು ಬಂದಿದ್ದರು. ಕಾಲಾನಂತರದಲ್ಲಿಹಲವು ಮಾವಿನ ಮರಗಳು ಕಣ್ಮರೆಯಾದರೂ ಕೆಲವಷ್ಟೇ ಉಳಿದುಕೊಂಡಿದ್ದವು. ಇದೀಗ ವಾಸು ಮತ್ತು ಅವರ ಮಕ್ಕಳುವ್ಯವಸಾಯ ಆರಂಭಿಸಿದ ನಂತರ ಒಂದು ಮಲಗೋಬ ತಳಿಯ ಮಾವಿನ ಮರ ಮಾತ್ರ ಉಳಿದುಕೊಂಡಿದೆ.
ನಮ್ಮ ತಾತ ಸಿದ್ದೇಗೌಡರು ನೆಟ್ಟ ಗಿಡ ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ.ನಮ್ಮ ಕುಟುಂಬಕ್ಕೆ ಆರ್ಥಿಕ ಶಕ್ತಿಯನ್ನೂ ತುಂಬಿದೆ. ನೂರು ವರ್ಷದ ಮಾಹಿತಿ, ನಮ್ಮ ತಾತನಿಂದ ನಮ್ಮತಂದೆಗೆ ಅವರಿಗೆ, ಬಳಿಕ ನನಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕುಟುಂಬದ ಜೀವನಾಡಿಯಾಗಿರುವ ಈಮರದ ಹುಟ್ಟುಹಬ್ಬ ಆಚರಿಸಿದ್ದೇವೆ.
ಬಿ.ಸಿ.ವಾಸು
ಪ್ರಗತಿಪರ ರೈತ ಬಿಳಗುಂಬ