ಬಿಡಿಸಿಸಿ ಚುನಾವಣೆಯಿಂದ ಹಿಂದೆ ಸರಿಲು ಹಣ ಪಡೆದಿಲ್ಲ

ಕೈಲಾಂಚ ಹೋಬಳಿ ಅಂಕನಹಳ್ಳಿ ಸೊಸೈಟಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಿಡಿಸಿಸಿ ಬ್ಯಾಂಕ್​ ಮಾಜಿ ನಿರ್ದೇಶಕ ಪಿ.ಅಶ್ವತ್ಥ, ಜೆಡಿಎಸ್​ ಮುಖಂಡ ಕವಣಾಪುರ ಶಿವಲಿಂಗಯ್ಯ, ಕೈಲಾಂಚ ಗ್ರಾಮ ಪಂಚಾಯಿತಿ ಮಾಜಿ ಅಧ್ಯ ಪಾಂಡುರಂಗ, ಕೈಲಾಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಅಧ್ಯ ವೆಂಕಟೇಶ್​ ಇದ್ದರು.
ಕೈಲಾಂಚ ಹೋಬಳಿ ಅಂಕನಹಳ್ಳಿ ಸೊಸೈಟಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಿಡಿಸಿಸಿ ಬ್ಯಾಂಕ್​ ಮಾಜಿ ನಿರ್ದೇಶಕ ಪಿ.ಅಶ್ವತ್ಥ, ಜೆಡಿಎಸ್​ ಮುಖಂಡ ಕವಣಾಪುರ ಶಿವಲಿಂಗಯ್ಯ, ಕೈಲಾಂಚ ಗ್ರಾಮ ಪಂಚಾಯಿತಿ ಮಾಜಿ ಅಧ್ಯ ಪಾಂಡುರಂಗ, ಕೈಲಾಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಅಧ್ಯ ವೆಂಕಟೇಶ್​ ಇದ್ದರು.
Published on

ಮಾಜಿ ನಿರ್ದೇಶಕ ಪಿ.ಅಶ್ವತ್ಥ ಸ್ಪಷ್ಟನೆ > ಆರೋಪ ಸಾಬೀತು ಪಡಿಸುವಂತೆ ಸವಾಲು

ಕೈಲಾಂಚ: ಬಿಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಿಂದ ಹಣ ಪಡೆದು ನಾಮಪತ್ರ ಹಿಂಪಡೆದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ತಾಪಂ ಮಾಜಿ ಸದಸ್ಯರೂ ಆಗಿರುವ ಬಿಡಿಸಿಸಿ ಬ್ಯಾಂಕ್​ ಮಾಜಿ ನಿರ್ದೇಶಕ ಪಿ.ಅಶ್ವತ್ಥ ಹೇಳಿದರು.
ಹೋಬಳಿಯ ಅಂಕನಹಳ್ಳಿ ಸೊಸೈಟಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 31 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ರಾಮನಗರ ತಾಪಂ ಸದಸ್ಯನಾಗಿ, ಪ್ರಭಾರ ಅಧ್ಯನಾಗಿ, 2 ಬಾರಿ ಬಿಡಿಸಿಸಿ ಬ್ಯಾಂಕ್​ ನಿರ್ದೇಶಕನಾಗಿದ್ದೆ. ಹಾಗೆಯೇ ಇತ್ತೀಚೆಗೆ ನಡೆದ ಬಿಡಿಸಿಸಿ ಬ್ಯಾಂಕ್​ ಚುನಾವಣೆಗೆ ಬೆಂಗಳೂರು ದಣ ೇತ್ರದಿಂದ ಉಮೇದುವಾರಿಕೆ ಸಲ್ಲಿಸಿದ್ದೆ. ಬಳಿಕ ಸ್ನೇಹಿತರು, ಹಿರಿಯರೊಂದಿಗೆ ಮಾತನಾಡಿ ಸಾಧಕ&ಬಾಧಕ ಚರ್ಚಿಸಿ ನಾಮಪತ್ರ ವಾಪಸ್​ ಪಡೆದಿದ್ದೆ. ಸದ್ಯ ಈ ವಿಚಾರ ಬಳಸಿಕೊಂಡು ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ, ತೇಜೋವಧೆ ಮಾಡುತ್ತಿದ್ದಾರೆ. ಅಭ್ಯರ್ಥಿಯೊಬ್ಬರಿಂದ 1 ಕೋಟಿ ರೂ. ಪಡೆದುಕೊಂಡು ನಾಮಪತ್ರ ವಾಪಸ್​ ಪಡೆದಿದ್ದಾರೆ ಎಂದು ಹುಯಿಲೆಬ್ಬಿಸಿದ್ದಾರೆ. ನಾನು ಇಂತಹ ಹೀನ ಕೆಲಸಕ್ಕೆ ಇಳಿಯುವುದಿಲ್ಲ. ಬೇಕಾದರೆ ಧರ್ಮಸ್ಥಳ ಶ್ರೀಮಂಜುನಾಥೇಶ್ವರ, ಶ್ರೀ ಚಾಮುಂಡೇಶ್ವರಿ ತಾಯಿ ಮುಂದೆ ಪ್ರಮಾಣ ಮಾಡಿ ಹೇಳುವೆ, ಯಾವುದೇ ಹಣ ಪಡೆದಿಲ್ಲ ಎಂದು ವಾಗ್ದಾನ ನೀಡಿದ ಅಶ್ವತ್ಥ, ನನ್ನ ಮೇಲಿನ ಆರೋಪವನ್ನು ಎದುರಾಳಿಗಳು ಸಾಬೀತು ಮಾಡಿದರೆ ರಾಜಕೀಯ ಜೀವನದಿಂದಲೇ ಹೊರಬರುತ್ತೇನೆ ಎಂದು ಸವಾಲೆಸೆದರು.
ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಸ್ಥಾನದ ವಿಚಾರದಲ್ಲಿ ತಾಲೂಕಿನ ಕೆಲವು ಸೊಸೈಟಿಗಳ ನಿರ್ದೇಶಕರನ್ನು ಆಯ್ಕೆ ಮಾಡುವಾಗ ನನ್ನ ಇತಿಮಿತಿಯಲ್ಲಿ ಸಾಕಷ್ಟು ಶ್ರಮಿಸಿದ್ದೇನೆ. ಚುನಾವಣೆ ವಿಚಾರದಲ್ಲಿ ನನ್ನ ಶ್ರಮವೂ ಸಾಕಷ್ಟಿದೆ. ರಾಜಕೀಯ ೇತ್ರದಲ್ಲಿ ಯಾವುದೇ ಕಪ್ಪುಚುಕ್ಕಿ ಇಲ್ಲದಂತೆ ಬದುಕಿದ್ದೇನೆ. ಯಾವುದೇ ಕಳಪೆ ಕಾಮಗಾರಿ ಮಾಡಿ ಹಣ ಲಪಟಾಯಿಸಿಲ್ಲ, ಭ್ರಷ್ಟಾಚಾರ ಮಾಡಿಲ್ಲ, ಬಡವರ ಹಣ ಹೊಡೆದಿಲ್ಲ, ನಂಬಿಕೆ ದ್ರೋಹ ಮಾಡಿಲ್ಲ. ಮರ್ಯಾದೆಯಿಂದ ಬದುಕಿದ್ದೇನೆ. ನನ್ನ ಹಿಂದೆ ಮಾತನಾಡುವವರು ನನ್ನ ಎದುರಿಗೆ ಬಂದು ಮಾತನಾಡಿ, ಸಾ ಸಮೇತ ಸಾಬೀತು ಮಾಡಲಿ. ಆಗ ನಾನು ತಲೆಬಾಗುತ್ತೇನೆ ಎಂದು ಪಿ.ಅಶ್ವತ್ಥ ಹೇಳಿದರು.
5 ವರ್ಷದ ಹಿಂದೆ ಇದೇ ಬಿಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಬೇರೆಯವರನ್ನು ನಿಲ್ಲಿಸಿ ನಾನು ಚುನಾವಣಾ ವೆಚ್ಚ ಭರಿಸಿದ್ದೆ. ವಾಸ್ತವಾಂಶ ಹೀಗಿದ್ದರೂ ಆ ಸಮಯದಲ್ಲೂ ನಾನು ಹಣ ಪಡೆದುಕೊಂಡಿದ್ದಾಗಿ ಅಪಪ್ರಚಾರ ಮಾಡಿದ್ದರು. ರಾಜಕೀಯದಲ್ಲಿ ನನ್ನ ಅಸ್ತಿತ್ವ ಉಳಿಸಿಕೊಳ್ಳಲು ಆಸ್ತಿ, ಹಣ, ಆಯಸ್ಸು ಕಳೆದುಕೊಂಡಿದ್ದೇನೆ ವಿನ@, ಕುಡಿತ, ಮೋಜು, ಜೂಜಿಗೆ ಹಣ ಕಳೆದುಕೊಂಡಿಲ್ಲ ಎಂದು ಪಿ.ಅಶ್ವತ್ಥ ಖಾರವಾಗಿ ಹೇಳಿದರು.
ಅಂಕನಹಳ್ಳಿ ಸಂದ ಅಧ್ಯ ವರದರಾಜು, ಶಿವರಾಜು, ಮಹದೇವಯ್ಯ, ಕವಣಾಪುರ ಸ್ವಾಮಿ, ಕರಿಯಪ್ಪ, ಕೆಂಪರಾಜು, ಸಿದ್ದರಾಮು, ಭದ್ರಗಿರಿಯಣ್ಣ, ರಾಜಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net