

ಬೆಂಗಳೂರು: ರಾಜ್ಯದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ಮೂಲಸೌಕರ್ಯ ಮತ್ತು ಹೂಡಿಕೆಗಳಷ್ಟೇ ಸಾಕಾಗುವುದಿಲ್ಲ. ಬಲಿಷ್ಠ ಹಾಗೂ ಭವಿಷ್ಯಕ್ಕೆ ಸಜ್ಜಾಗಿರುವ ಪ್ರತಿಭಾ ಸಂಪನ್ಮೂಲವೂ ಅಗತ್ಯ ಎಂದು ಐಟಿ, ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎನ್. ಮಂಜುಳಾ ತಿಳಿಸಿದರು.
ಐಐಐಟಿ- ಬೆಂಗಳೂರಿನ ಮಷಿನ್ ಇಂಟೆಲಿಜೆನ್ಸ್ ಆೃಂಡ್ ರೊಬಾಟಿಕ್ಸ್ ಶ್ರೇಷ್ಠತಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಸೆಮಿಕಂಡಕ್ಟರ್ ಕೇಂದ್ರೀಕೃತ ಕೌಶಲಾಭಿವೃದ್ಧಿ ಕಾರ್ಯಕ್ರಮದಲ್ಲಿ ಕೆ ಆೃಂಡ್ ವಿಎಲ್‌ಎಸ್‌ಐ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮದ ಮೂರನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಶಿಕ್ಷಣ ಮತ್ತು ಸೆಮಿಕಂಡಕ್ಟರ್ ಕೈಗಾರಿಕೆಗೆ ಅಗತ್ಯವಿರುವ ಪ್ರಾಯೋಗಿಕ ಕೌಶಲಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಮುಖ ಪ್ರಯತ್ನವಾಗಿದೆ. ಸರ್ಕಾರ, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳನ್ನು ಒಂದೇ ವೇದಿಕೆಯಲ್ಲಿ ತರಿಸುವ ಮೂಲಕ, ಇಂಜಿನಿಯರಿಂಗ್ ಪದವೀಧರರಿಗೆ ಈ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಕಾರ್ಯಕ್ರಮವು ಪರಿಣಾಮಕಾರಿ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.
ಐಐಐಟಿ-ಬೆಂಗಳೂರು ನಿರ್ದೇಶಕ ಪ್ರೊ. ದೇಬಬ್ರತ ದಾಸ್ ಮಾತನಾಡಿ, ಬಲಿಷ್ಠ ಸೆಮಿಕಂಡಕ್ಟರ್ ಪ್ರತಿಭಾ ಸಂಪನ್ಮೂಲವನ್ನು ನಿರ್ಮಿಸಲು ಶೈಕ್ಷಣಿಕ ಅಡಿಪಾಯದೊಂದಿಗೆ ಪ್ರಾಯೋಗಿಕ ಮತ್ತು ಕೈಗಾರಿಕಾ ಕೇಂದ್ರೀಕೃತ ಕಲಿಕೆಯನ್ನು ಸಂಯೋಜಿಸುವ ಕಾರ್ಯಕ್ರಮಗಳ ಅಗತ್ಯವಿದೆ ಎಂದರು.
ಮೂರನೇ ಬ್ಯಾಚ್‌ನ ಯಶಸ್ವಿ ಪೂರ್ಣಗೊಳಿಸುವಿಕೆಯೊಂದಿಗೆ, ಕರ್ನಾಟಕದ ವಿಸ್ತರಿಸುತ್ತಿರುವ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಅಗತ್ಯವಿರುವ ಕೈಗಾರಿಕಾ ಸಿದ್ಧತೆಯುಳ್ಳ ನುರಿತ ಮಾನವ ಸಂಪನ್ಮೂಲ ಮತ್ತು ಪ್ರತಿಭಾ ನೆಲೆಯನ್ನು ಬಲಪಡಿಸುವ ರಾಜ್ಯದ ಪ್ರಯತ್ನಗಳಿಗೆ ೆ ಆೃಂಡ್ ವಿಎಲ್‌ಎಸ್‌ಐ ಕಾರ್ಯಕ್ರಮವು ನಿರಂತರವಾಗಿ ಕೊಡುಗೆ ನೀಡುತ್ತಿದೆ ಎಂದರು.