ಯುವಿಸಿಇ: ದೈಹಿಕ ನಿರ್ದೇಶಕ/ಯೋಗ ಶಿಕ್ಷಕ ಹುದ್ದೆಗೆ ಅರ್ಜಿ

ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವು (ಯುವಿಸಿಇ) ದೈಹಿಕ ನಿರ್ದೇಶಕ ಮತ್ತು ಯೋಗ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
Visvesvaraya Engineering College University (UVCE)
ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯFile photo
Published on: 

ಬೆಂಗಳೂರು: ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವು (ಯುವಿಸಿಇ) ದೈಹಿಕ ನಿರ್ದೇಶಕ ಮತ್ತು ಯೋಗ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಹುದ್ದೆಯು 11 ತಿಂಗಳ ತಾತ್ಕಾಲಿಕ ಅವಧಿಯದ್ದಾಗಿರುತ್ತದೆ. ಎಐಸಿಟಿಇ/ಯುಜಿಸಿ ನಿಯಮಗಳ ಅನುಸಾರ ಬಿ.ಪಿ.ಇಡಿ/ಎಂ.ಪಿಇಡಿ ಮತ್ತು ಯೋಗ ಶಿಕ್ಷಣದಲ್ಲಿ ಕನಿಷ್ಠ ಒಂದು ಸರ್ಟಿಫಿಕೇಟ್ ಕೋರ್ಸ್ ಪ್ರಮಾಣಪತ್ರ ಹೊಂದಿರುವ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಯುವಿಸಿಇ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅ.21ರೊಳಗೆ ಸಲ್ಲಿಸಬಹುದು ಎಂದು ಯುವಿಸಿಇ ಪ್ರಭಾರ ಕುಲಸಚಿವರು ಪ್ರಕಟಣೆ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net