ಜಯನಗರದಲ್ಲಿ ಜೋಯಾಲುಕ್ಕಾಸ್‌ನ 2ನೇ ಶೋರೂಂ ಆರಂಭ: ಮೇಕಿಂಗ್ ಚಾರ್ಜ್ ಮೇಲೆ ಶೇ.50 ರಿಯಾಯಿತಿ

ಶೋರೂಂ ಉದ್ಘಾಟನೆಯ ಅಂಗವಾಗಿ ಸೀಮಿತ ಅವಧಿಯ ವಿಶೇಷ ಕೊಡುಗೆ ಘೋಷಿಸಿದೆ. ಇದರ ಅಡಿಯಲ್ಲಿ ಚಿನ್ನ, ಪ್ಲಾಟಿನಂ, ಬೆಳ್ಳಿ, ರತ್ನದ ಹರಳು, ವಜ್ರ ಮತ್ತು ಕಚ್ಚಾ (ಅನ್‌ಕಟ್) ವಜ್ರದ ಆಭರಣಗಳ ಮಜೂರಿ (ಮೇಕಿಂಗ್ ಚಾರ್ಜ್)ಯ ಮೇಲೆ ಶೇ.50 ನೇರ ರಿಯಾಯಿತಿ ನೀಡುತ್ತಿದೆ. ಈ ಕೊಡುಗೆಯು ನ.8ರವರೆಗೆ ಚಾಲ್ತಿಯಲ್ಲಿರುತ್ತದೆ.
‘Joyalukkas’ opened its second showroom in Jayanagar on Saturday.
‘ಜೋಯಾಲುಕ್ಕಾಸ್’ ಜಯನಗರದಲ್ಲಿ ತನ್ನ ಎರಡನೇ ಮಳಿಗೆಯನ್ನು ಶನಿವಾರ ಕಾರ್ಯಾರಂಭ ಮಾಡಿತು.File photo
Published on: 

ಬೆಂಗಳೂರು: ಜನಪ್ರಿಯ ಆಭರಣ ಮಳಿಗೆಗಳಲ್ಲಿ ಒಂದಾಗಿರುವ ‘ಜೋಯಾಲುಕ್ಕಾಸ್’ ಜಯನಗರದಲ್ಲಿ ತನ್ನ ಎರಡನೇ ಮಳಿಗೆಯನ್ನು ಶನಿವಾರ ಕಾರ್ಯಾರಂಭ ಮಾಡಿತು.

ಜಯನಗರ 3ನೇ ಬ್ಲಾಕ್‌ನಲ್ಲಿ ಆರಂಭವಾಗಿರುವ ಶೋರೂಂಗೆ ಸ್ಥಳೀಯ ಶಾಸಕ ಸಿ.ಕೆ. ರಾಮಮೂರ್ತಿ ಹಾಗೂ ನಟಿ ಮಾಳವಿಕಾ ಶರ್ಮಾ ಚಾಲನೆ ನೀಡಿದರು. ಈ ವೇಳೆ ಆರ್ಟ್ ಆ್ ಜ್ಯುವೆಲ್ಲರಿ ವ್ಯವಸ್ಥಾಪಕ ನಿರ್ದೇಶಕ ಸುಮೇಶ್ ವಧೇರಾ, ಜೋಯಾಲುಕ್ಕಾಸ್ ಸಿಒಒ ಹೆನ್ರಿ ಜಾರ್ಜ್, ಮಾರುಕಟ್ಟೆ ಮುಖ್ಯಸ್ಥ ಅನಿಶ್ ವರ್ಗೀಸ್, ರೀಟೈಲ್ ಮುಖ್ಯಸ್ಥ ರಾಜೇಶ್ ಕೃಷ್ಣನ್, ಪ್ರಾದೇಶಿಕ ವ್ಯವಸ್ಥಾಪಕ ಜಿನೇಸ್ ವಿ.ಎಸ್. ಸೇರಿ ಇಡೀ ಜೋಯಾಲುಕ್ಕಾಸ್ ಕುಟುಂಬ ಭಾಗಿಯಾಗಿತ್ತು.

ಮೇಕಿಂಗ್ ಚಾರ್ಜ್ ಮೇಲೆ ಶೇ.50 ರಿಯಾಯಿತಿ

ಶೋರೂಂ ಉದ್ಘಾಟನೆಯ ಅಂಗವಾಗಿ ಸೀಮಿತ ಅವಧಿಯ ವಿಶೇಷ ಕೊಡುಗೆ ಘೋಷಿಸಿದೆ. ಇದರ ಅಡಿಯಲ್ಲಿ ಚಿನ್ನ, ಪ್ಲಾಟಿನಂ, ಬೆಳ್ಳಿ, ರತ್ನದ ಹರಳು, ವಜ್ರ ಮತ್ತು ಕಚ್ಚಾ (ಅನ್‌ಕಟ್) ವಜ್ರದ ಆಭರಣಗಳ ಮಜೂರಿ (ಮೇಕಿಂಗ್ ಚಾರ್ಜ್)ಯ ಮೇಲೆ ಶೇ.50 ನೇರ ರಿಯಾಯಿತಿ ನೀಡುತ್ತಿದೆ. ಈ ಕೊಡುಗೆಯು ನ.8ರವರೆಗೆ ಚಾಲ್ತಿಯಲ್ಲಿರುತ್ತದೆ.

ವಿಶೇಷ ಶ್ರೇಣಿಯ ಆಭರಣಗಳು ಲಭ್ಯ

ಸಾಂಪ್ರದಾಯಿಕ ವಿನ್ಯಾಸ ಮತ್ತು ಭವ್ಯವಾದ ವೈವಾಹಿಕ ಆಭರಣ ಸಂಗ್ರಹಗಳಿಂದ ಹಿಡಿದು, ಜಾಗತಿಕ ಶೈಲಿಗಳಿಂದ ಪ್ರೇರಿತವಾದ ಅತ್ಯಾಧುನಿಕ ವಿನ್ಯಾಸದ ಆಭರಣಗಳು ಲಭ್ಯವಾಗಲಿವೆ. ವಿಶಾಲ ಒಳಾಂಗಣ ಮತ್ತು ಸುಂದರವಾದ ಅಲಂಕಾರವು ಗ್ರಾಹಕರಿಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ. ತನ್ನ ಎಲ್ಲ ಶೋರೂಮ್‌ನಂತೆಯೇ ಇಲ್ಲಿಯೂ ತರಬೇತಿ ಪಡೆದ ವೃತ್ತಿಪರರ ತಂಡವು ಗ್ರಾಹಕರಿಗೆ ವೈಯಕ್ತಿಕ ಮಾರ್ಗದರ್ಶನ ನೀಡಲು ಸಿದ್ಧವಿದೆ.

ಜಯನಗರದಲ್ಲಿ ನಮ್ಮ ಎರಡನೇ ಶೋರೂಂ ಅನ್ನು ತೆರೆಯುವುದು ಕೇವಲ ಹೊಸ ವಿಳಾಸವನ್ನು ಸೇರಿಸುವುದಷ್ಟೇ ಅಲ್ಲ, ಬದಲಾಗಿ ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯ ಹೊಂದಿರುವ ಈ ಪ್ರದೇಶದ ಭಾಗವಾಗುವುದಾಗಿದೆ. - ಡಾ. ಜಾಯ್ ಆಲುಕ್ಕಾಸ್, ಜೋಯಾಲುಕ್ಕಾಸ್ ಸಮೂಹದ ಸಿಎಂಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net