ರಾಜಧಾನಿಯಲ್ಲಿ ಒತ್ತುವರಿ ತೆರವಿಗೆ ಎರಡು ದಿನ ವಿರಾಮ

encroachment-clearance
encroachment-clearance
Published on

ಪ್ರಮುಖ ಮುಖ್ಯಾಂಶಗಳು

  • ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗೆ ನಿರ್ಲಕ್ಷ್ಯ
  • ಅನ್ಯ ಕಾರ್ಯದ ಒತ್ತಡದಿಂದ ಫುಟ್‌ಪಾತ್ ಒತ್ತುವರಿ ನಿಧಾನ

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿನ ಪಂಚ ನಗರ ಪಾಲಿಕೆಗಳು ಕೈಗೊಂಡಿರುವ ಪಾದಚಾರಿ ಮಾರ್ಗಗಳ ಮೇಲಿನ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಶನಿವಾರ ಹಾಗೂ ಭಾನುವಾರ ರಜೆ ಕಾರಣ ವಿರಾಮ ನೀಡಲಾಗಿದೆ.

ಕಳೆದ 40 ದಿನಗಳಿಂದ ಮಹಾನಗರದಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆಯಿಂದ ಹಲವು ಕಡೆಗಳಲ್ಲಿ ಫುಟ್‌ಪಾತ್ ಮೇಲಿದ್ದ ಅನಧಿಕೃತ ಭಾಗಗಳನ್ನು ತೆಗೆದುಹಾಕಲಾಗಿದೆ. ಇದರಿಂದ ಆಯಾ ಪ್ರದೇಶಗಳಲ್ಲಿ ನಾಗರಿಕರು ಪಾದಚಾರಿ ಮಾರ್ಗಗಳ ಮೇಲೆ ಸರಾಗವಾಗಿ ಓಡಾಡುವ ಸ್ಥಿತಿ ನಿರ್ಮಾನವಾಗಿದೆ. ಹೆಚ್ಚಿನ ಕಡೆಗಳಲ್ಲಿ ಪಾಲಿಕೆಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದ್ದರೂ, ವ್ಯಾಪಾರಿ ವಲಯದಿಂದ ವಿರೋಧ ವ್ಯಕ್ತವಾಗಿದೆ.
ಒಂದು ತಿಂಗಳಿಂದ ನಿರಂತರವಾಗಿ ಕಾರ್ಯಾಚರಣೆ ಕೈಗೆತ್ತಿಕೊಂಡಿರುವ ಕಾರಣ ಕಾರ್ಮಿಕರು ಹಾಗೂ ಜೆಸಿಬಿ ಯಂತ್ರಗಳಿಗೆ ಬಿಡುವೇ ಇಲ್ಲದಂತಾಗಿದೆ. ಇದನ್ನು ಗಮನಿಸಿರುವ ಅಧಿಕಾರಿಗಳು, ಎರಡು ಮತ್ತು ನಾಲ್ಕನೇ ಶನಿವಾರದ ಜತೆಗೆ ಮರುದಿನ ಭಾನುವಾರಗಳಂದು ಎರಡು ದಿನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಉಳಿದ ದಿನಗಳಲ್ಲಿ ಯಥಾಪ್ರಕಾರಣ ತೆರವು ಕಾರ್ಯ ಕೈಗೊಳ್ಳಲಾಗುತ್ತಿದೆ. ಮುಖ್ಯವಾಗಿ ಶಿವಾಜಿನಗರದಲ್ಲಿ ತೆರವು ಕಾರ್ಯಾಚರಣೆ ವೇಳೆ ಪಾಲಿಕೆ ಸಿಬ್ಬಂದಿ ಹಾಗೂ ವಾಹನ ಚಾಲಕರ ಮೇಲೆ ಹಲ್ಲೆ ನಡೆದ ಬಳಿಕ ಪ್ರತಿ ಪಾಕ್ಷಿಕ ವೇಳೆ ಎರಡು ದಿನ ತೆರವು ಕಾರ್ಯಕ್ಕೆ ತಾತ್ಕಲಿಕ ಬಿಡುವು ನೀಡಲಾಗುತ್ತಿದೆ.

ಪೂರ್ವ ಪಾಲಿಕೆಯಲ್ಲಿ ತೆರವು ಕಾರ್ಯ ನಿಧಾನ:

ಐದು ನಗರ ಪಾಲಿಕೆಗಳಲ್ಲಿ ಈವರೆಗೆ 836 ಕಿ.ಮೀ. ಉದ್ದದಷ್ಟು ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲಾಗಿದೆ. ಇದರಲ್ಲಿ ಉತ್ತರ, ಪಶ್ಚಿಮ ಹಾಗೂ ಕೇಂದ್ರ ಕಾರ್ಪೋರೇಷನ್‌ಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಆದರೆ, ಪೂರ್ವ ಪಾಲಿಕೆ ಕಳೆದ 2-3 ವಾರಗಳಿಂದ ಸಮರ್ಪಕವಾಗಿ ತೆರವು ಕಾರ್ಯ ಕೈಗೊಂಡಿಲ್ಲ. ವಾರದಲ್ಲಿ 1 ಅಥವಾ 2 ದಿನ ಮಾತ್ರ ಕಾರ್ಯಾಚರಣೆ ನಡೆಸಿ ಉಳಿದ ದಿನ ಅನ್ಯ ಕಾರ್ಯದತ್ತ ಚಿತ್ತ ಹರಿಸಿದೆ. ತೆರವು ಕಾರ್ಯದ ಬಗ್ಗೆ ಜಿಬಿಎಗೂ ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ ಎಂಬ ಆಕ್ಷೇಪದ ಮಧ್ಯೆ ಪೂರ್ವ ಪಾಲಿಕೆ ಕಳಪೆ ಸಾಧನೆ ಮಾಡಿದೆ. ತೆರವು ಕಾರ್ಯಕ್ಕೆ ಅಧಿಕಾರಿ ವರ್ಗ ಸಬೂಬು ಹೇಳುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಸಚಿವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ:

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೃಷ್ಣ ಬೈರೇಗೌಡ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇದು ನಾಗರಿಕರ ಶ್ಲಾಘನೆಗೂ ಒಳಗಾಗಿದ್ದು, ಹಲವೆಡೆ ಪಾದಚಾರಿ ಮಾರ್ಗಗಳು ಒತ್ತುವರಿಮುಕ್ತಗೊಂಡಿವೆ. ಇದರಿಂದ ಖುಷಿಗೊಂಡಿರುವ ರಾಮಮೂರ್ತಿನಗರದ ಕೆಲ ನಾಗರಿಕರು ಕೃಷ್ಣಬೈರೇಗೌಡ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದೆ.

ಪಾಲಿಕೆವಾರು ಫುಟ್‌ಪಾತ್ ತೆರವು ವಿವರ:

ಪಾಲಿಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net