ದೆಹಲಿಯಿಂದ ಬೆಂಗಳೂರಿಗೆ ಡ್ರಗ್ಸ್ ಸಾಗಣೆ ಮೂವರ ಬಂಧನ

Drugs
Drugs
Published on: 

ಬೆಂಗಳೂರು: ದೇಶದಲ್ಲಿ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ) 7 ಕೆ.ಜಿಗೂ ಹೆಚ್ಚು ಆಂಫೆಟಮೈನ್ ಮತ್ತು 3 ಕೆ.ಜಿ ಕೊಕೇನ್ ವಶಪಡಿಸಿಕೊಂಡು ಮೂವರು ಪೆಡ್ಲರ್ಸ್‌ಗಳನ್ನು ಬಂಧಿಸಿದೆ.

ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಸಾಗಣೆ ಮಾಡುತ್ತಿದ್ದ ಡ್ರಗ್ಸ್ ಜಪ್ತಿ ಮಾಡಿರುವ ಅಧಿಕಾರಿಗಳು ನಾಗ್ಪುರದಿಂದ ದೆಹಲಿ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುತ್ತಿದ್ದ ಕೋಟ್ಯಂತರ ರೂ.ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

ನಿರ್ದಿಷ್ಟ ಗುಪ್ತಚರ ಮಾಹಿತಿ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಡಿಆರ್‌ಐ ಅಧಿಕಾರಿಗಳು, ಪ್ರಯಾಣಿಕರ ಬ್ಯಾಗ್‌ಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ 5.166 ಕೆ.ಜಿ ಆಂಫೆಟಮೈನ್ ಪತ್ತೆಯಾಗಿದೆ.

ನಂತರ ಮರುದಿನ ನಡೆಸಿದ ಕಾರ್ಯಾಚರಣೆ ವೇಳೆಯೂ ದೆಹಲಿಯಿಂದ ಹೈದರಾಬಾದ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ತಡೆದು ಪರಿಶೀಲನೆ ನಡೆಸಿದಾರೆ. ಬ್ಯಾಗ್‌ಒಳಗೆ ಅಡಗಿಸಿದ್ದ ಬಿಳಿ ಬಣ್ಣದ ಸ್ಫಟಿಕದ ವಸ್ತು ಪತ್ತೆಯಾಗಿದೆ. ಪರೀಕ್ಷೆ ನಡೆಸಿದಾದ ಡ್ರಗ್ಸ್ ಎಂದು ತಿಳಿದಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net