ಸರ್ಕಾರದ ಬಳಿ ಪಿಂಚಣಿಗೂ ಹಣವಿಲ್ಲ

ಅಂಗವಿಕಲರಿಗೆ ಪಿಂಚಣಿ ನೀಡಲು ಯೋಗ್ಯತೆ ಇಲ್ಲ ಎಂದು ರಾಜ್ಯಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್​.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
R ASHOK
R ASHOK
Published on: 

ಬೆಂಗಳೂರು : ಅಂಗವಿಕಲರಿಗೆ ಪಿಂಚಣಿ ನೀಡಲು ಯೋಗ್ಯತೆ ಇಲ್ಲವೆಂದರೆ ಖಜಾನೆ ಖಾಲಿಯಾಗಿದೆ ಎಂದು ನಾಮಲಕ ಹಾಕಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು ರಸ್ತೆಯಲ್ಲಿ ಅಂಗವಿಕಲರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಳೆದ 30 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಇವರ ಸಮಸ್ಯೆಗೆ ಸ್ಪಂಧಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಸರ್ಕಾರಿ ಕಚೇರಿಗಳಲ್ಲಿ 10,000 ರೂ.ಗೆ ದುಡಿಯುವ ಅಂಗವಿಕಲರು ಬೀದಿಗಿಳಿದಿದ್ದಾರೆ. ಅವರ ಪ್ರತಿಭಟನೆ ತಡೆಯಲು ಸಾವಿರ ಪೊಲೀಸರನ್ನು ನಿಯೋಜಿಸಿ 40 ಬಸ್‌ಗಳನ್ನು ಇರಿಸಲಾಗಿದೆ ಎಂದು ದೂರಿದರು.

ದಿವಾಳಿಯಾಗಿರುವ ಸರ್ಕಾರದ ಬಣ್ಣ ಬಯಲು ಮಾಡಲು ನಾವು ಬಂದಿದ್ದೇವೆ. ಸರ್ಕಾರ ಲಾಠಿ ಪ್ರಹಾರ ಮಾಡಿದರೂ, ಗೋಲಿಬಾರ್ ಮಾಡಿದರೂ 1500 ಅಂಗವಿಕಲರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಎಚ್ಚರಿಸಿದರು.

ಅಂಗವಿಕಲರನ್ನು ಪೊಲೀಸರು ಹೊತ್ತೊಯ್ಯುವ ಚಿತ್ರಗಳು ಮಾಧ್ಯಮಗಳಲ್ಲಿ ಬಂದರೆ ಸರ್ಕಾರದ ಮಾನ ಹರಾಜಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net