ಹೆಣ್ಣೂರಿನ ಆಸ್ಪತ್ರೆಗೆ ಅತ್ಯಾಧುನಿಕ ನ್ಯೂರೋ ಐಸಿಯು ‘ಸ್ಪರ್ಶ’

* ಉತ್ತರ ಬೆಂಗಳೂರಿನಲ್ಲಿ ನರರೋಗ ಚಿಕಿತ್ಸಾ ಸೌಲಭ್ಯ ಮೇಲ್ದರ್ಜೆಗೆ
ಹೆಣ್ಣೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಆರಂಭಿಸಿರುವ ಅತ್ಯಾಧುನಿಕ ನ್ಯೂರೋ ಇಂಟೆನ್ಸಿವ್ ಕೇರ್ ಯುನಿಟ್ (ನ್ಯೂರೋ ಐಸಿಯು) ಅನ್ನು ಇಸ್ರೋದ ಯು.ಆರ್. ರಾವ್ ಉಪಗ್ರಹ ಕೇಂದ್ರದ ಉಪನಿರ್ದೇಶಕ ಡಾ.ಎಸ್. ವೆಂಕಟೇಶ್ವರ ಶರ್ಮಾ ಉದ್ಘಾಟಿಸಿದರು. ಆಸ್ಪತ್ರೆಯ ಸಿಇಒ ಜಸ್‌ದೀಪ್ ಸಿಂಗ್, ಕ್ಲಸ್ಟರ್ ಸಿಒಒ ಕರ್ನಲ್ ರಾಹುಲ್ ತಿವಾರಿ, ಡಾ. ಮುರಳಿ ಮೋಹನ್, ಡಾ. ಎನ್. ನಿತಿನ್‌ಕುಮಾರ್ ಇತರರಿದ್ದರು.
ಹೆಣ್ಣೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಆರಂಭಿಸಿರುವ ಅತ್ಯಾಧುನಿಕ ನ್ಯೂರೋ ಇಂಟೆನ್ಸಿವ್ ಕೇರ್ ಯುನಿಟ್ (ನ್ಯೂರೋ ಐಸಿಯು) ಅನ್ನು ಇಸ್ರೋದ ಯು.ಆರ್. ರಾವ್ ಉಪಗ್ರಹ ಕೇಂದ್ರದ ಉಪನಿರ್ದೇಶಕ ಡಾ.ಎಸ್. ವೆಂಕಟೇಶ್ವರ ಶರ್ಮಾ ಉದ್ಘಾಟಿಸಿದರು. ಆಸ್ಪತ್ರೆಯ ಸಿಇಒ ಜಸ್‌ದೀಪ್ ಸಿಂಗ್, ಕ್ಲಸ್ಟರ್ ಸಿಒಒ ಕರ್ನಲ್ ರಾಹುಲ್ ತಿವಾರಿ, ಡಾ. ಮುರಳಿ ಮೋಹನ್, ಡಾ. ಎನ್. ನಿತಿನ್‌ಕುಮಾರ್ ಇತರರಿದ್ದರು.
Published on: 

ಬೆಂಗಳೂರು: ಉತ್ತರ ಬೆಂಗಳೂರಿನ ಹೆಣ್ಣೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಅತ್ಯಾಧುನಿಕ ನ್ಯೂರೋ ಇಂಟೆನ್ಸಿವ್ ಕೇರ್ ಯುನಿಟ್ (ನ್ಯೂರೋ ಐಸಿಯು) ಅನ್ನು ಆರಂಭಿಸಿದ್ದು, ಇಸ್ರೋದ ಯು.ಆರ್. ರಾವ್ ಉಪಗ್ರಹ ಕೇಂದ್ರದ ಉಪನಿರ್ದೇಶಕ ಡಾ.ಎಸ್. ವೆಂಕಟೇಶ್ವರ ಶರ್ಮಾ ನೂತನ ಘಟಕವನ್ನು ಉದ್ಘಾಟಿಸಿದರು.

ಪಾರ್ಶ್ವವಾಯು, ಮಿದುಳು ಮತ್ತು ಬೆನ್ನುಹುರಿ ಗಾಯಗಳು, ಮೂರ್ಛೆ ರೋಗ ಸೇರಿ ಗಂಭೀರ ನರರೋಗ ಸಮಸ್ಯೆಗಳಿಗೆ 24 ಗಂಟೆಗಳ ತುರ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಘಟಕ ಸ್ಥಾಪಿಸಲಾಗಿದೆ. ವಿಡಿಯೋ ಇಇಜಿ, ಇಂಟ್ರಾಕ್ರೇನಿಯಲ್ ಪ್ರೆಶರ್ ಮಾನಿಟರಿಂಗ್, ಮೆಕ್ಯಾನಿಕಲ್ ವೆಂಟಿಲೇಶನ್ ಸೇರಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ.

ಇದೇ ಸಂದರ್ಭದಲ್ಲಿ ಸ್ಟ್ರೋಕ್ ಚಿಕಿತ್ಸೆಗೆ ಸಂಬಂಧಿಸಿದಂತೆ ವೈದ್ಯಕೀಯ ತಂಡಗಳಿಗಾಗಿ ರೂಪಿಸಿರುವ ‘ಸ್ಟ್ರೋಕ್ ಮ್ಯಾನ್ಯುಯಲ್’ ಬಿಡುಗಡೆ ಮಾಡಲಾಯಿತು. ಅಲ್ಲದೆ, ನರರೋಗ, ನರಶಸ್ತ್ರಚಿಕಿತ್ಸೆ ಮತ್ತು ಹೃದಯರೋಗ ವಿಭಾಗಗಳನ್ನು ಒಳಗೊಂಡ ಸಮಗ್ರ ಮಿದುಳು ಮತ್ತು ಹೃದಯಾಘಾತ ತಡೆಗಟ್ಟುವಿಕೆ ಕ್ಲಿನಿಕ್‌ಗೂ ಚಾಲನೆ ನೀಡಲಾಯಿತು.

ಆಸ್ಪತ್ರೆಯ ಕ್ಲಸ್ಟರ್ ಸಿಒಒ ಕರ್ನಲ್ ರಾಹುಲ್ ತಿವಾರಿ ಮಾತನಾಡಿ, ಬದಲಾಗುತ್ತಿರುವ ಸಮುದಾಯದ ಅಗತ್ಯಗಳಿಗೆ ತಕ್ಕಂತೆ ಆರೋಗ್ಯ ಸೇವೆಗಳೂ ಮೇಲ್ದರ್ಜೆಗೇರಬೇಕಿದೆ. ನಗರ ವಿಸ್ತಾರವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಜನರಿಗೆ ಸಮೀಪದಲ್ಲೇ ಅತ್ಯಾಧುನಿಕ ವೈದ್ಯಕೀಯ ಸೇವೆಗಳು ಲಭ್ಯವಾಗುವುದು ಇಂದಿನ ತುರ್ತು. ಹೆಣ್ಣೂರಿನಲ್ಲಿ ಆರಂಭವಾಗಿರುವ ಈ ನ್ಯೂರೋ ಐಸಿಯು, ಅತ್ಯುತ್ತಮ ವೈದ್ಯಕೀಯ ಪರಿಣತಿ ಹಾಗೂ ಕಾಳಜಿಯುಕ್ತ ಚಿಕಿತ್ಸೆಯನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವ ಬದ್ಧತೆ ಹೊಂದಿದೆ ಎಂದರು.

ಸ್ಪರ್ಶ್ ಆಸ್ಪತ್ರೆಗಳ ಸಿಇಒ ಜಸ್‌ದೀಪ್ ಸಿಂಗ್, ನ್ಯೂರೋ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಮುರಳಿ ಮೋಹನ್, ಹಿರಿಯ ಸಮಾಲೋಚಕ ಡಾ.ಎನ್. ನಿತಿನ್‌ಕುಮಾರ್, ಹಿರಿಯ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.