ಭಕ್ತಿಭಾವದೊಂದಿಗೆ ನೆರವೇರಿದ ಶ್ರೀನಿವಾಸ ಕಲ್ಯಾಣ

ಚಿಕ್ಕಲಸಂದ್ರದ ಬೃಂದಾವನ ಗೋಶಾಲೆಯಲ್ಲಿ ಆಯೋಜನೆ
The Srinivasa Kalyanotsava, organized by the Srinivasa Utsava Balaga at the Brindavana Goshala in Chikkalasandra, concluded amidst an atmosphere of deep devotion.
ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ಚಿಕ್ಕಲಸಂದ್ರದ ಬೃಂದಾವನ ಗೋಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವವು ಭಕ್ತಿ ಭಾವದೊಂದಿಗೆ ಸಂಪನ್ನಗೊಂಡಿತು.
Published on: 

ಬೆಂಗಳೂರು : ವಿಜಯದಶಮಿಯ ಅಂಗವಾಗಿ ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ಚಿಕ್ಕಲಸಂದ್ರದ ಬೃಂದಾವನ ಗೋಶಾಲೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವು ಭಕ್ತಿಭಾವದೊಂದಿಗೆ ಸಂಪನ್ನಗೊಂಡಿತು.

ಶ್ರೀನಿವಾಸ ಸ್ವಾಮಿಯ ಕೃಪೆಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೇದಮಂತ್ರಗಳ ಪಠಣೆ, ದಾಸಸಾಹಿತ್ಯದ ಗಾಯನ ಹಾಗೂ ಭಕ್ತಿಪೂರ್ಣ ನಿರೂಪಣೆಯ ಮೂಲಕ ಶ್ರೀನಿವಾಸ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ದಿವ್ಯ ಕಲ್ಯಾಣದ ಮಹಿಮೆಯನ್ನು ವಿವರಿಸಲಾಯಿತು.

ವಿದುಷಿ ಶುಭ ಸಂತೋಷ್,ಅಪೂರ್ವ ಲಕ್ಷ್ಮಿ ರವರ ಸುಮಧುರ ಗಾಯನ , ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿ ಹಳ್ಳಿ ಅವರ ನಿರೂಪಣೆಯಲ್ಲಿ ಭಕ್ತಿ, ಸಂಪ್ರದಾಯ ಮತ್ತು ಆಧ್ಯಾತ್ಮಿಕ ಚಿಂತನೆಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಸನಾತನ ಧಾರ್ಮಿಕ ಪರಂಪರೆಯ ಮಹತ್ವವನ್ನು ಸಾರಿದ ಕಲ್ಯಾಣೋತ್ಸವವು ಭಕ್ತರಲ್ಲಿ ಭಗವಂತನ ಮೇಲಿನ ಶ್ರದ್ಧೆ, ಭಕ್ತಿ ಮತ್ತು ಸತ್ಸಂಗದ ಮಹತ್ವವನ್ನು ಬಿಂಬಿಸಿತು.

ಇಂತಹ ಧಾರ್ಮಿಕ ಕಾರ್ಯಕ್ರಮಗಳು ಭಾರತೀಯ ಸಂಸ್ಕೃತಿ, ದಾಸಸಾಹಿತ್ಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಡಾ.ವಾದಿರಾಜ ತಾಯಲೂರು, ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net