ಶ್ರೀ ರಾಮರಥೋತ್ಸವ

ಶ್ರೀ ರಾಮೋತ್ಸವ
ಶ್ರೀ ರಾಮೋತ್ಸವ
Published on

ಪ್ರಮುಖ ಮುಖ್ಯಾಂಶಗಳು

  • * ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
ಬೆಂಗಳೂರು: ರಾಮನವಮಿ ಪ್ರಯುಕ್ತ ಶುಕ್ರವಾರ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷವಾಗಿ ‘ಶ್ರೀ ರಾಮರಥೋತ್ಸವ’ ಜರುಗಿತು. ಬೆಳಗ್ಗೆ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿಗೆ ಅಭಿಷೇಕ ಹಾಗೂ ಮಹಾಮಂಗಳಾರತಿ ನಡೆಯಿತು. ದೇವಳದ ಹೊರಭಾಗದಲ್ಲಿ ಅರವಿಂಟಿಗೆ ಪೂಜೆ ಹಾಗೂ ಉತ್ಸವಗಳು ನಡೆದವು. ಮಧ್ಯಾಹ್ನ ಮಂಗಳವಾದ್ಯ ಸಹಿತ ದೇವಳದ ಆವರಣದಿಂದ ಹೊರಗೆ ‘ಶ್ರೀರಾಮರಥೋತ್ಸವ’ ಜರುಗಿತು. ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆಯೂಂದಿಗೆ ಅನ್ನಸಂತರ್ಪಣೆಯೂ ನಡೆಯಿತು. ಸಂಜೆ ಗಜೇಂದ್ರ ಮೋಕ್ಷ ಮತ್ತು ಗಜೇಂದ್ರ ವಾಹನೋತ್ಸವ, ಹಂಸವಾಹನೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net