

ಬೆಂಗಳೂರು: ಪ್ರತಿಷ್ಠಿತ ಆರ್.ವಿ. ಕಾಲೇಜ್ ಆಫ್ ಆರ್ಕಿಟೆಕ್ಚರ್ ( RV College of Architecture ) 2026-27ನೇ ಶೈಕ್ಷಣಿಕ ಸಾಲಿನ ನೂತನ ವಿದ್ಯಾರ್ಥಿಗಳ ಐದು ವರ್ಷಗಳ ಆರ್ಕಿಟೆಕ್ಚರ್ ಶೈಕ್ಷಣಿಕ ಪಯಣಕ್ಕೆ ಅದ್ಧೂರಿ ಚಾಲನೆ ನೀಡಿದ್ದು, ನೂತನ ಬ್ಯಾಚ್‌ಗಾಗಿ ಆಯೋಜಿಸಿದ್ದ 'ಉದ್ಘಾಟನಾ ಸಮಾರಂಭ 2026'ರಲ್ಲಿ ನೂರಾರು ವಿದ್ಯಾರ್ಥಿಗಳು, ಪೋಷಕರು, ಬೋಧಕ ಸಿಬ್ಬಂದಿ ಹಾಗೂ ಶಿಕ್ಷಣ ರಂಗದ ತಜ್ಞರು ಒಂದಾಗಿ ಕಾಲೇಜಿನ ಈ ಹೊಸ ಅಧ್ಯಾಯ ಮತ್ತು ನಿರಂತರ ಶೈಕ್ಷಣಿಕ ಬೆಳವಣಿಗೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು.
ಜ್ಯಾಕರಿಯಾ ಕನ್ಸಲ್ಟೆಂಟ್ಸ್‌ನ ಭಾಗಿದಾರ ಅರ್. ಅಭಯ್ ಜ್ಯಾಕರಿಯಾ ಹಾಗೂ ನವಾ ಡಿಸೈನ್ ಲ್ಯಾಬ್ಸ್‌ನ ಸಂಸ್ಥಾಪಕಿ ಅರ್. ಆನ್ ಸ್ಯಾಂಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ (RSST) ಅಧ್ಯಕ್ಷ ಡಾ. ಎಂ.ಪಿ. ಶ್ಯಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಿಕ್ಷಣ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಎರಡು ಅತ್ಯಾಧುನಿಕ ಡಿಜಿಟಲ್ ಸೌಲಭ್ಯಗಳನ್ನು ಉದ್ಘಾಟಿಸಲಾಯಿತು. 'ಆಡ್ವಾನ್ಸ್ಡ್ ಲ್ಯಾಬ್ ಫಾರ್ ಡಿಜಿಟಲ್ ಡಾಕ್ಯುಮೆಂಟೇಶನ್' ಕೇಂದ್ರವು ಡ್ರೋನ್ ಆಧಾರಿತ ಸರ್ವೇ ಹಾಗೂ 3D ಲೇಸರ್ ಸ್ಕ್ಯಾನಿಂಗ್‌ಗೆ ನೆರವಾಗಲಿದ್ದರೆ, 'RVCA-ನೆಮೆಟ್ಸ್ಚೆಕ್ AEC ಎಕ್ಸಲೆನ್ಸ್ ಸೆಂಟರ್' ವಿದ್ಯಾರ್ಥಿಗಳಿಗೆ ಆಧುನಿಕ ಆರ್ಕಿಕ್ಯಾಡ್ ಸಾಫ್ಟ್‌ವೇರ್ ತರಬೇತಿ ನೀಡಲಿದೆ.
ಕಾಲೇಜಿನ ವಾರ್ಷಿಕ ಸಂಶೋಧನಾ ನಿಯತಕಾಲಿಕೆ 'ಕಲ್ಪ - ಸಂಕಲನ'ದ ಹೊಸ ಆವೃತ್ತಿಯನ್ನು ಡಾ. ರಾಕೇಶ್ ಕೆ.ಎಸ್. ಮತ್ತು ಪ್ರಮುಖ ಉಪನ್ಯಾಸಕರು ಬಿಡುಗಡೆ ಮಾಡಿದರು. ಟೀಕೇಸ್ ಇಂಟೀರಿಯರ್ ಸೊಲ್ಯೂಷನ್ಸ್ ನೀಡುವ 'ಪ್ರೋಆಕ್ಟಿಸ್ ಪ್ರಶಸ್ತಿ'ಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪ್ರಿನ್ಸಿಪಲ್ ಡಾ. ರಾಕೇಶ್ ಕೆ.ಎಸ್. ಮಾರ್ಗದರ್ಶನದಲ್ಲಿ, ಪ್ರೊ. ಶ್ವೇತಾ ಪೆಡಾಪರ್ತಿ ನೇತೃತ್ವದ ತಂಡ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿತು.