ಮುಂದುವರೆದು, ಒಂದು ತಿಂಗಳು ಆರಾಮಾದಯಕವಾಗಿತ್ತು. ಬೆಂಗಳೂರಿನ ತಂಪು ತಾಪಮಾನದಲ್ಲಿ ಮನೆಗಾಗಿ ಹುಡುಕಾಟ ಕೂಲ್ ಆಗಿತ್ತು. ನಾನು ಹೊಸ ಆಫೀಸಿಗೆ ನಿತ್ಯ 52 ಕಿ.ಮೀ ಓಡಾಡುತ್ತಿದ್ದೆ. ವಾರಾಂತ್ಯದಲ್ಲಿ ಇಂದಿರಾನಗರ, ದೊಮ್ಮಲೂರು, ವಿಕ್ಟೋರಿಯಾ ಲೇಔಟ್, ಫ್ರೇಜರ್ ಟೌನ್, ರಿಚ್ಮಂಡ್ ಟೌನ್ ಸುತ್ತಾಡಿದೆ. ಟು ಲೆಟ್ ಬೋರ್ಡ್ ಕಂಡ ಮನೆ ಮಾಲೀಕರಿಗೆ (Bengaluru House Hunt struggle) ಕರೆ ಮಾಡುವುದು, ಫೇಸ್ಬುಕ್, ಇನ್ಸ್ಟಾಗ್ರಾಮ್, ರೆಡ್ಡಿಟ್ ಹೀಗೆ ಹಲವು ಕಡೆ ಹುಡುಕಾಡಿದೆ. 25 ಸಾವಿರ ರೂಪಾಯಿಗೆ ಹಾಲ್, ಕಿಚನ್, ಇರುವ ಮನೆ ಸಿಗಲೇ ಇಲ್ಲ. ಫೆಬ್ರವರಿ 1ನೇ ತಾರೀಕಾದರೂ ನನ್ನ ಪರಿಸ್ಥಿತಿ ಬದಲಾಗಲಿಲ್ಲ. ಕೊನೆಗೆ ವಿಧಿಯಿಲ್ಲದೆ 8000 ಕೊಟ್ಟು ಹೌಸಿಂಗ್ ಪ್ರೀಮಿಯಂ ಮತ್ತು ನೋಬ್ರೋಕರ್ ಮನಿ ಬ್ಯಾಕ್ ಪ್ಲಾನ್ ಖರೀದಿ ಮಾಡಿಕೊಂಡೆ.