

ಬೆಂಗಳೂರು: ಸ್ಟ್ಯಾಂಪ್ ಪೇಪರ್, ಬ್ಯಾಂಕ್‌ಗಳ ಎನ್‌ಓಸಿ, ಐಷಾರಾಮಿ ಹಾಗೂ ಬೆಲೆಬಾಳುವ ಕಾರುಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡುತ್ತಿದ್ದ ಜಾಲವನ್ನು ವಿಲ್ಸನ್‌ಗಾರ್ಡನ್ ಠಾಣೆ ಪೊಲೀಸರು ಪತ್ತೆ ಮಾಡಿದ್ದಾರೆ.
ಮೆಹಬೂಬ್ ಲೇಔಟ್ ಉಮರ್ ನಗರದ ನಿವಾಸಿ ನೌಶಾದ್ ಖಾನ್ ಎಂಬುವರು ನೀಡಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು, ಜ್ಞಾನಭಾರತಿ ನಗರದ ನಿವಾಸಿ ಸೋಮೇಶ್ (45), ಎರೋಹಳ್ಳಿ ನಿವಾಸಿಗಳಾದ ಸಂತೋಷ್(37), ಪ್ರಭಾಕರ್ (41) ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 10 ಐಷಾರಾಮಿ ಕಾರುಗಳು, ನಕಲಿ ಆರ್‌ಸಿ ಕಾರ್ಡ್, ವಿವಿಧ ಬ್ಯಾಂಕ್‌ಗಳ ಎನ್‌ಓಸಿ ಪತ್ರ, ಸಾರಿಗೆ ಮತ್ತು ಆರ್‌ಟಿಒ ಇಲಾಖೆಗೆ ಸೇರಿದ ನಕಲಿ ಸೀಲ್‌ಗಳು, ನಕಲಿ ದಾಖಲೆ ತಯಾರಿಸಲು ಬಳಸುತ್ತಿದ್ದ ಯಂತ್ರೋಪಕರಣ, ಕಂಪ್ಯೂಟರ್, ಡಿಜಿಟಲ್ ಫ್ರಿಂಟರ್ ಸೇರಿ ಅಂದಾಜು 2 ಕೋಟಿ ರೂ.ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆ.3ರಂದು 11ಮಂದಿ ವಿರುದ್ಧ ದಾಖಲಾಗಿದ್ದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು, ದೂರುದಾರ ನೌಶಾದ್ ಖಾನ್‌ಗೆ ಪರಿಚಯವಿದ್ದ ಕಾರು ಡೀಲರ್ ಜನಾರ್ಧನ್ ತನ್ನ ಬಳಿಯ ಟಯೋಟಾ ಾರ್ಚೂನರ್ ಕಾರು ಇರುವುದಾಗಿ ಹೇಳಿ, ದೂರುದಾರನ ವಾಟ್ಸ್‌ಅಪ್‌ಗೆ ಕಳುಹಿಸಿದ್ದಾನೆ. ಅದೇ ದಿನ ಕಾರನ್ನು ತೋರಿಸುವುದಾಗಿ ತಿಳಿಸಿ, ಮೂರನೇ ಪಿ.ದರ್ಶನ್ ಎಂಬಾತನಿಗೆ ೆನ್ ೇ ಮುಖಾಂತರ ಅಡ್ವಾನ್ಸ್ ಹಣ ಕಳುಹಿಸುವಂತೆ ಹೇಳಿದ್ದಾನೆ. ಆತನ ಮಾತು ನಂಬಿ 20 ಸಾವಿರ ರೂ. ೆನ್ ೇ ಮೂಲಕ ವರ್ಗಾವಣೆ ಮಾಡಿದ್ದಾನೆ.
ವಿಲ್ಸನ್ ಗಾರ್ಡ್‌ನ್ ರಾಣಿ ಪಾರ್ಕ್ ಬಳಿ ಕಾರನ್ನು ತಂದು ವ್ಯಾಪಾರ ಮಾಡಿ, ಆರ್‌ಸಿ ಕಾರ್ಡ್ ಸಮೇತ ಕಾರನ್ನು ನೀಡಿದ್ದಾರೆ. ಮರುದಿನ ಆರ್‌ಸಿ ಕಾರ್ಡ್ ಪರಿಶೀಲನೆ ನಡೆಸಿದಾಗ ನಕಲಿ ಎಂಬುವುದು ಪತ್ತೆಯಾಗಿದೆ.
ತನಿಖೆ ಮುಂದುವರೆಸಿದ ಪೊಲೀಸರು ಕಾರು ಮಾರಾಟ ಮಾಡಿದ್ದ ಡೀಲರ್ ಜನಾರ್ಧನ್ ಸಹಚರನನ್ನು ಸೆ.14 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಇತರರು ಸೇರಿಕೊಂಡು ಬೆಲೆಬಾಳುವ ಕಾರುಗಳ ಆರ್‌ಸಿ ಕಾರ್ಡ್, ಬ್ಯಾಂಕ್‌ಗಳ ಎನ್‌ಓಸಿ, ಸೀಲ್‌ಗಳನ್ನು ಸೃಷ್ಟಿಸಿ ನಕಲಿ ದಾಖಲೆ ಪತ್ರಗಳನ್ನು ನೀಡುತ್ತಿರುವುದು ಪತ್ತೆಯಾಗಿದೆ. ಆರೋಪಿಗಳು ನಾಲ್ಕೈದು ವರ್ಷಗಳಿಂದ ಈ ದಂಧೆ ಮುಂದುರೆಸಿಕೊಂಡು ಬಂದಿರುವುದು ಪತ್ತೆಯಾಗಿದೆ. ಈ ಜಾಲದಲ್ಲಿ ಇನ್ನಷ್ಟು ವ್ಯಕ್ತಿಗಳು ಶಾಮಿಲಾಗಿದ್ದು, ಅವರ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕಾರು ಮಾರಾಟ ದಂಧೆಯಲ್ಲಿ ತೊಡಗಿದ್ದ ಗುಂಪು ನಕಲಿ ದಾಖಲೆ, ಎನ್‌ಓಸಿ, ಸರ್ಕಾರಿ ಇಲಾಖೆ ಸೀಲ್ ಇಟ್ಟುಕೊಂಡು ಅಕ್ರಮ ಎಸಗುತ್ತಿದ್ದವರ ಪೈಕಿ ಮೂರನ್ನು ಬಂಧಿಸಲಾಗಿದೆ. ವಾಹನಗಳ ಆರ್‌ಸಿ ಕಾರ್ಡ್ ನಕಲು ಮಾಡದಂತೆ ಹೆಚ್ಚಿನ ಸುರಕ್ಷತೆ ಹೊಂದಿರುವ ಬಗ್ಗೆ ಆರ್‌ಟಿಒ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಜಾಲದ ಬಗ್ಗೆ ತನಿಖೆ ಮುಂದುವರೆದಿದೆ.
-ಸೀಮಂತ್‌ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತರು.