ಜಿಬಿಎ ವ್ಯಾಪ್ತಿಯಲ್ಲಿ 11.34 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ

ಜಿಬಿಎ ವ್ಯಾಪ್ತಿಯಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮ
ಜಿಬಿಎ ವ್ಯಾಪ್ತಿಯಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಡಿ. 21 ರಿಂದ 24ರವರೆಗೆ ಲಸಿಕೆ ಕಾರ್ಯಕ್ರಮ ನಡೆಯಲಿದೆ
  • ನಗರದಲ್ಲಿ ಒಟ್ಟು 28,38,822 ಮನೆಗಳ ಗುರುತು
  • ಒಟ್ಟು 4,452 ಲಸಿಕೆ ಕೇಂದ್ರಗಳು, 3,391 ಸ್ಥಿತ ಲಸಿಕೆ ಕೇಂದ್ರಗಳ ರಚನೆ
ಬೆಂಗಳೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ 0-5 ವರ್ಷದ 11.34 ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಯೋಜನಾ ಘಟಕಗಳು, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಡಬ್ಲೂೃಎಚ್‌ಒ, ಯುನಿಸ್ೆ, ಯುಎನ್‌ಡಿಪಿ ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳ ಸಹಕಾರದಿಂದ ಈ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲಿ 145 ಯೋಜನಾ ಘಟಕಗಳಿಗೆ ಕಾರ್ಯಯೋಜನೆಯನ್ನು ರೂಪಿಸಲಾಗಿದೆ.
ಅದರಂತೆ ನಗರದಲ್ಲಿ ಒಟ್ಟು 28,38,822 ಮನೆಗಳಲ್ಲಿ 11,34,588 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, ಅದಕ್ಕಾಗಿ ಒಟ್ಟು 4,452 ಲಸಿಕೆ ಕೇಂದ್ರಗಳು ಹಾಗೂ 3,391 ಸ್ಥಿತ ಲಸಿಕೆ ಕೇಂದ್ರಗಳನ್ನು ರಚಿಸಲಾಗಿದೆ. 601 ಟ್ರಾನ್ಸಿಟ್ ತಂಡಗಳು, 460 ಮೊಬೈಲ್ ತಂಡಗಳು, 17,808 ಲಸಿಕೆದಾರರು, 881 ಮೇಲ್ಚಿಚಾರಕರನ್ನು ನಿಯೋಜಿಸಲಾಗಿದೆ.
ನಗರದಲ್ಲಿ 1,349 ಕೊಳಗೇರಿ ಪ್ರದೇಶಗಳನ್ನು ಗುರುತಿಸಲಾಗಿದ್ದು, ಇಲ್ಲಿನ 4,69,849 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹಾಕಿಕೊಂಡಿದೆ. ವಲಸೆ ಜನಸಂಖ್ಯೆ ವಾಸವಿರುವ 4,373 ಸ್ಥಳಗಳನ್ನು ಗುರುತಿಸಲಾಗಿದ್ದು, ಇಲ್ಲಿ 11,899 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಈ ಸಂಬಂಧ ನಗರದ ಎಲ್ಲಾ ಪೋಷಕರು, ಪಾಲಕರು ಹಾಗೂ ಸಮುದಾಯದ ಸದಸ್ಯರಿಗೆ ಈ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಐದು ವರ್ಷದೊಳಗಿನ ಮಕ್ಕಳಿಗೆ ಶೇ.100 ಲಸಿಕೆ ವ್ಯಾಪ್ತಿ ಸಾಧಿಸುವಲ್ಲಿ ಹಾಗೂ ಪೋಲಿಯೋ ಮುಕ್ತ ಭಾರತವನ್ನು ಉಳಿಸಿಕೊಳ್ಳುವಲ್ಲಿ ಸಹಕರಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮನವಿ ಮಾಡಿದೆ.

ಜಿಬಿಎ ವೆಬ್‌ಸೈಟ್:

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಮೀಪದ ಪಲ್ಸ್ ಪೋಲಿಯೋ ಲಸಿಕೆ ಕೇಂದ್ರವನ್ನು ಪತ್ತೆಹಚ್ಚಲು ಸಹಾಯಕವಾಗುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಪರಿಚಯಿಸಿದೆ. ಜಿಬಿಎ ವೆಬ್‌ಸೈಟ್‌ನಲ್ಲಿ ಈ ಕ್ಯೂಆರ್ ಕೋಡ್ ಠಿಠಿ://ಜಚಿ.ಚ್ಟ್ಞಠಿ.ಜಟ.ಜ್ಞಿ/ಟ್ಝಜಿಟ/ ಅಪ್ ಲೋಡ್ ಮಾಡಲಾಗಿದ್ದು, ಪೋಷಕರು ಮತ್ತು ಪಾಲಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ಹತ್ತಿರದ ಕೇಂದ್ರವನ್ನು ಸುಲಭವಾಗಿ ಪತ್ತೆಹಚ್ಚಲು ಇದು ಸಹಕಾರಿಯಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net