ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಕುರಿತು ಸರ್ಕಾರ ಹಾಗೂ ಸಾರಿಗೆ ಇಲಾಖೆ ದ್ವಂದ್ವ ನಿಲುವು ತಾಳುತ್ತಿವೆ ಎಂದು ಆರೋಪಿಸಿರುವ ಒಕ್ಕೂಟ, ಕಾನೂನುಬದ್ಧತೆ ಸ್ಪಷ್ಟಪಡಿಸಿ ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದೆ. ಬೈಕ್ ಟ್ಯಾಕ್ಸಿಗಳಿಂದ ಆಟೋ, ಟ್ಯಾಕ್ಸಿ ಸೇರಿ ಸಾಂಪ್ರದಾಯಿಕ ಖಾಸಗಿ ಸಾರಿಗೆ ವಲಯದ ಲಕ್ಷಾಂತರ ಚಾಲಕರು ಹಾಗೂ ವಾಹನ ಮಾಲೀಕರ ಜೀವನೋಪಾಯಕ್ಕೆ ಹೊಡೆತ ಬೀಳುತ್ತಿದೆ ಎಂದು ತಿಳಿಸಿದೆ.