ಸುಪ್ರೀಂ ಬಗ್ಗೆ ಜನರಿಗಿಲ್ಲ ವಿಶ್ವಾಸ

ಎಸ್ ಐ ಆರ್ ವಿಷಯದಲ್ಲಿ ಸುಪ್ರೀಂ ಕೋರ್ಟ್​ನಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ. ರಾಷ್ಟ್ರದ ಜನರು ಸುಪ್ರೀಂ ಕೋರ್ಟ್‌ನ ಬಗ್ಗೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕರ್ಷ ಬಿ.ಕೆ.ಹರಿಪ್ರಸಾದ್​ ತಿಳಿಸಿದರು.
B.K.Hariprasad
Published on: 

ಬೆಂಗಳೂರು: ಎಸ್‌ಐಆರ್ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಸುಪ್ರೀಂಕೋರ್ಟ್ ವಕೀಲರು ಏನೇನು ಹೇಳುತ್ತಿದ್ದಾರೆ ನೋಡಿ. ರಾಷ್ಟ್ರದ ಜನರು ಸುಪ್ರೀಂ ಕೋರ್ಟ್‌ನ ಬಗ್ಗೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಬುಧವಾರ ಮಾಧ್ಯಮಗಳಿಗೆ ತಿಳಿಸಿದರು.

ನಮೂನೆ 6 ರ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಮಾನವೇ ಇಷ್ಟೊಂದು ಅನಾಹುತಕ್ಕೆ ಕಾರಣ ನಮೂನೆ 6 ನ್ನು ಬದಲಾಯಿಸಿದಾಗ ಸುಪ್ರೀಂ ಕೋರ್ಟ್ ಅದಕ್ಕೆ ಮುದ್ರೆ ಒತ್ತಿತು. ಇದಾದ ಬಳಿಕವೇ ಎಸ್‌ಐಆರ್ ನಲ್ಲಿ ಇಷ್ಟೆಲ್ಲ ಅನಾಹುತಗಳಾಗುತ್ತಿವೆ.

ನಮೂನೆ 6ಕ್ಕೆ ಸಂಬಂಧಿಸಿದ ನಿರ್ಧಾರವನ್ನು ಸಂಪೂರ್ಣ ಚುನಾವಣೆ ಆಯೋಗವೇ ತೀರ್ಮಾನ ಕೈಗೊಂಡಿದ್ದರೆ ನಮ್ಮದೇನೂ ಅಭ್ಯಂತರ ಇರಲಿಲ್ಲ.

ಇಬ್ಬರು ಸಹ ಆಯುಕ್ತರು ಸ್ಪಷ್ಟವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರೂ ಯಾವುದೇ ವಿಚಾರಣೆ ಆಗದೆ ಅದಕ್ಕೆ ಮುದ್ರೆ ಒತ್ತಿದ್ದು ಇಷ್ಟೊಂದು ಅನಾಹುತಕ್ಕೆ ಕಾರಣವಾಯಿತು ಎಂದರು.

* ಮೀಸಲು ಹೋರಾಟ ನಿರಂತರ*

ಮೀಸಲು ವಿಷಯದಲ್ಲಿ 1963 ರಿಂದ ನಿರಂತರ ಹೋರಾಟ ನಡೆಯುತ್ತಿದೆ. ಜನಸಂಖ್ಯೆ ಆಧಾರಿತ ಮೀಸಲು ಆಗಬೇಕು ಎಂಬುದು ನಮ್ಮ ಒತ್ತಾಯ. ಮೀಸಲಾತಿ ಎಂದರೆ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ ಎಲ್ಲರಿಗೂ ಸಮಪಾಲು, ಸಮಬಾಳು ಸಿಗಬೇಕು ಎಂಬುದು ಸಂವಿಧಾನದ ಆಶಯ ಎಂದು ಹರಿಪ್ರಸಾದ್ ತಿಳಿಸಿದರು.

ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಿಸುವ ತೀರ್ಮಾನ ತೆಗೆದುಕೊಂಡು 9ನೇ ಶೆಡ್ಯೂಲ್ ಗೆ ಸೇರಿಸಿದರು. ಆಗಲೇ ಕೋರ್ಟ್‌ನಲ್ಲಿ ಸಿಂಧು ಆಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net