

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ನಗರ ಹಾಗೂ ಪಟ್ಟಣಗಳಲ್ಲಿ ಜನಪ್ರಿಯವಾಗಿರುವ ತಾರಸಿ ತೋಟ ಸೇರಿದಂತೆ ನಗರ ತೋಟಗಾರಿಕೆ ವಿಧಾನದಡಿ ನಾಗರಿಕರು ತಮ್ಮ ಮನೆಗಳಲ್ಲಿ ಬೆಳೆಯುವ ಹಣ್ಣು-ತರಕಾರಿ ಹಾಗೂ ಅಲಂಕಾರಿಕ ಗಿಡಗಳ ಬೆಳವಣಿಗೆಗೆ ಗೊಬ್ಬರದ ಅಗತ್ಯತೆ ಅತ್ಯಗತ್ಯ. ಕಾಂಕ್ರೀಟ್ ಕಾಡಿನಲ್ಲಿ ಈ ಕೊರತೆ ನೀಗಿಸಿಕೊಳ್ಳಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ‘ಜೈವಿಕ ಗೊಬ್ಬರದ ಕ್ಯಾಪ್ಸೂಲ್’ ರೂಪಿಸಿ ಅದನ್ನು ನವೋದ್ಯಮ ವೇದಿಕೆಯಡಿ ಮಾರಾಟ ಮಾಡಿ ಗಮನ ಸೆಳೆದಿದ್ದಾರೆ.