ಸಪ್ತ ಅಧಿಕಾರಿಗಳಿಗೆ ಲೋಕಾ ಶಾಕ್

Lokayukta
Lokayukta
Published on: 

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಗಳಿಕೆ ಆರೋಪದಡಿ ವಿವಿಧ ಇಲಾಖೆಗಳ ಒಟ್ಟು 7 ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳನ್ನು ಪತ್ತೆ ಮಾಡಿದೆ.

ಧಾರವಾಡ, ಬೀದರ್, ಚಿತ್ರದುರ್ಗ, ಬಾಗಲಕೋಟೆ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿನ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ಮನೆ ಸೇರಿದಂತೆ ಒಟ್ಟು 31 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧ ನಡೆಸಿದರು.

ಷಡಾಕ್ಷರಯ್ಯ, ಚಾಲಕ ಕಂ ನಿರ್ವಾಹಕ, ಡಿಪೋ-1 ಎನ್‌ಡಬ್ಲೂೃಕೆಎಸ್‌ಆರ್‌ಟಿಸಿ, ಹುಬ್ಬಳ್ಳಿ

3 ಸ್ಥಳಗಳ ಮೇಲೆ ದಾಳಿ. ಶೋಧನಾ ಸಮಯದ ವೇಳೆ ಸ್ಥಿರಾಸ್ತಿಗಳಾದ ನಿವೇಶನಗಳು, ವಾಸದ ಮನೆ ಪತ್ತೆಯಾಗಿದೆ. ಚರಾಸ್ತಿಯಾದ ನಗದು, ಚಿನ್ನಾಭರಣ, ವಾಹನಗಳು ಸೇರಿ ಇತರ ಗೃಹೋಪಯೋಗಿ ವಸ್ತುಗಳು ಕಂಡು ಬಂದಿವೆ. ಸೇವಾವಧಿಯಲ್ಲಿ ಬಲ್ಲ ಮೂಲಗಳ ಆದಾಯಕ್ಕಿಂತ ಅಕ್ರಮ ಆಸ್ತಿ ಪತ್ತೆಯಾಗಿದೆ.

ರಾಜ್‌ಕುಮಾರ್, ಪ್ರಾಚಾರ್ಯರು, ಬ್ರಿಮ್ಸ್ ಕಾಲೇಜ್ ಆ್ ನರ್ಸಿಂಗ್, ಬೀದರ್.

5 ಸ್ಥಳಗಳ ಮೇಲೆ ದಾಳಿ. ಶೋಧನಾ ಸಮಯದ ವೇಳೆ ಸ್ಥಿರಾಸ್ತಿಗಳಾದ ನಿವೇಶನಗಳು, ವಾಸದ ಮನೆ, ಕೃಷಿ ಜಮೀನು ಹಾಗೂ ಕಾರ್ಖಾನೆ ಪತ್ತೆಯಾಗಿದೆ. ಚರಾಸ್ತಿಯಾದ ನಗದು, ಚಿನ್ನಾಭರಣ, ವಾಹನಗಳು ಸೇರಿ ಇತರ ವಸ್ತುಗಳು ಕಂಡು ಬಂದಿವೆ. ತನಿಖೆ ವೇಳೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಕಂಡು ಬಂದಿದೆ. ತನಿಖೆ ಮುಂದುವರಿದಿದೆ.

ಕೆ. ಸುರೇಂದ್ರ, ವಲಯ ಅರಣ್ಯ ಸಂರಕ್ಷಣಾಧಿಕಾರಿ, ಾರೆಸ್ಟ್ ಸ್ಕ್ವಾಡ್ ವಿಭಾಗ, ಮೈಸೂರು

3 ಸ್ಥಳಗಳ ಮೇಲೆ ದಾಳಿ ಆಗಿದ್ದು, ಈ ವೇಳೆ ಸ್ಥಿರಾಸ್ತಿಯಲ್ಲಿ ನಿವೇಶನಗಳು, ವಾಸದ ಮನೆ ಪತ್ತೆಯಾಗಿದೆ. ಚರಾಸ್ತಿಯಲ್ಲಿ ನಗದು, ಚಿನ್ನಾಭರಣ ಹಾಗೂ ಇತರ ವಸ್ತುಗಳು ಪತ್ತೆಯಾಗಿದ್ದು, ಸೇವಾವಧಿಯಲ್ಲಿ ಅಕ್ರಮ ಆಸ್ತಿ ಗಳಿಸಿರುವುದು ಕಂಡು ಬಂದಿದೆ.

ಎಚ್.ಆರ್. ಹೇಮಂತ್ ಕುಮಾರ್, ವಲಯ ಅರಣ್ಯಾಧಿಕಾರಿ, ಸಕಲೇಶಪುರ

5 ಸ್ಥಳಗಳ ಮೇಲೆ ದಾಳಿ. ಸ್ಥಿರಾಸ್ತಿಯಲ್ಲಿ ನಿವೇಶನಗಳು, ವಾಸದ ಮನೆಗಳು, ಕೃಷಿ ಜಮೀನು ಪತ್ತೆಯಾದರೆ, ಚರಾಸ್ತಿಯಲ್ಲಿ ನಗದು-ಚಿನ್ನಾಭರಣ ಪತ್ತೆಯಾಗಿದೆ. ಆದಾಯಕ್ಕಿಂತ ಹೆಚ್ಚಿನ ಹಣ ಗಳಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಎಸ್.ಟಿ. ವೆಂಕಟೇಶಪ್ಪ, ನಿರೀಕ್ಷಕರು, ಕಾನೂನು ಮಾಪನ ಇಲಾಖೆ, ಚಿತ್ರದುರ್ಗ

4 ಸ್ಥಳಗಳ ಮೇಲೆ ದಾಳಿ. ಸ್ಥಿರಾಸ್ತಿಗಳಾದ ನಿವೇಶನಗಳು, ವಾಸದ ಮನೆಗಳು, ಕೃಷಿ ಜಮೀನು ಕಂಡು ಬಂದಿದೆ. ಚರಾಸ್ತಿಯಲ್ಲಿ ನಗದು ಚಿನ್ನಾಭರಣ ಹಾಗೂ ವಾಹನಗಳು ಪತ್ತೆಯಾಗಿದೆ. ಅಕ್ರಮ ಆಸ್ತಿ ಗಳಿಕೆ ಪತ್ತೆಯಾಗಿದೆ.

ಸಂಜೀವ ಅಪ್ಪಸಾಬ್ ಹಿಪ್ಪರಗಿ, ಸಹಾಯಕ ನಿರ್ದೇಶಕರು, ಪಂಚಾಯತ್ ರಾಜ್, ಜಮಖಂಡಿ

6 ಸ್ಥಳಗಳ ಮೇಲೆ ದಾಳಿ. ಸ್ಥಿರಾಸ್ತಿಯಲ್ಲಿ ವಾಸದ ಮನೆಗಳು, ಕೃಷಿ ಜಮೀನು ಪತ್ತೆಯಾದರೆ, ಚರಾಸ್ತಿಯಲ್ಲಿ ನಗದು, ಚಿನ್ನಾಭರಣ, ವಾಹನಗಳು, ನಿಶ್ಚಿತ ಠೇವಣಿಗಳು ಹಾಗೂ ಇತರೆ ವಸ್ತುಗಳು ಕಂಡು ಬಂದಿವೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ.

ಡಾ.ಎಸ್.ಪಿ. ರವೀಂದ್ರ, ಜಿಲ್ಲಾ ಶಸಕರು, ಜಿಲ್ಲಾಸ್ಪತ್ರೆ, ಚಿತ್ರದುರ್ಗ

5 ಸ್ಥಳಗಳ ಮೇಳೆ ದಾಳಿ. ಸ್ಥಿರಾಸ್ತಿಗಳಾದ ನಿವೇಶನಗಳು, ವಾಸದ ಮನೆಗಳು, ಕೃಷಿ ಜಮೀನು ಪತ್ತೆಯಾಗಿದ್ದು, ಚರಾಸ್ತಿಯಲ್ಲೂ ನಗದು, ಚಿನ್ನಾಭರಣ, ವಾಹನಗಳು ಪತ್ತೆಯಾಗಿವೆ. ಸೇವಾವಧಿಯಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವುದು ಕಂಡು ಬಂದಿದೆ.