ಪರಿಷತ್ ಫಲಿತಾಂಶ ಆಡಳಿತ-ವಿಪಕ್ಷಗಳಿಗೆ ಅಗ್ನಿಪರೀಕ್ಷೆ

ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಕರೆಯಿಸಿಕೊಂಡಿರುವ ವಿಧಾನಪರಿಷತ್​ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಕ್ಕೆ ದಾರಿ ಮಾಡಿಕೊಡಲಿದೆ.
ಪರಿಷತ್ ಫಲಿತಾಂಶ ಆಡಳಿತ-ವಿಪಕ್ಷಗಳಿಗೆ ಅಗ್ನಿಪರೀಕ್ಷೆ
Published on: 

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಹಾಗೂ ಎನ್‌ಡಿಎ ಮೈತ್ರಿಕೂಟದ ಸಾಮರ್ಥ್ಯ ಸಾಬೀತುಪಡಿಸಲಿರುವ ವಿಧಾನ ಪರಿಷತ್ ದ್ವೆವಾರ್ಷಿಕ ಚುನಾವಣೆಯ ಲಿತಾಂಶ ಮಂಗಳವಾರ ಪ್ರಕಟವಾಗಲಿದ್ದು ತೀವ್ರ ಕುತೂಹಲ ಮೂಡಿಸಿದೆ.

ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಕರೆಯಿಸಿಕೊಂಡಿರುವ ಈ ಫಲಿತಾಂಶವು ರಾಜ್ಯರಾಜಕೀಯದ ಮುಂದಿನ ನಡೆಗೆ ಹೊಸ ರೂಪು ಕೊಡಲಿದೆ. ಹೊಸ ಸಮೀಕರಣಕ್ಕೆ ದಾರಿ ಮಾಡಿಕೊಡಲಿದೆ.

ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಿಂದ ವಿಧಾನಪರಿಷತ್‌ನ ನಾಲ್ಕು ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆದಿತ್ತು. 3,43,535 ಮತದಾರರ ಪೈಕಿ ಶೇ.79.53 ರಷ್ಟು ಜನರು ಮತ ಚಲಾವಣೆ ಮಾಡಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಶೇ.81.98, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.86.97 ಹಾಗೂ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶೇ.73.58 ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಶೇ 75.62 ರಷ್ಟು ಮತ ಚಲಾವಣೆ ಆಗಿದೆ.

ನಾಲ್ಕೂ ಸ್ಥಾನಗಳಿಗೆ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದೆ. ಬಿಜೆಪಿ- ಜೆಡಿಎಸ್ ತನ್ನ ಮೈತ್ರಿಕೂಟದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಒಟ್ಟು 43 ಉಮೇದುವಾರರ ಹಣೆಬರಹ ಮಂಗಳವಾರ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಗೊತ್ತಾಗಲಿದೆ.

ಚುನಾವಣೆ ಆಯೋಗ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಮತ ಎಣಿಕೆ ಟೇಬಲ್, ಎಣಿಕೆ ಸಿಬ್ಬಂದಿಯಿಂದ ಹಿಡಿದು ಲಿತಾಂಶ ೋಷಣೆವಬರೆಗೆ ಅನುಸರಿಸಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.

ಕಳೆದ ಬಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರವೊಂದರಲ್ಲಿ ಮಾತ್ರ ಪುಟ್ಟಣ್ಣ ಅವರ ಮೂಲಕ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ಈ ಸಲ ಎಲ್ಲ ನಾಲ್ಕೂ ಕ್ಷೇತ್ರಗಳಲ್ಲಿ ಗೆದ್ದು ಇತಿಹಾಸ ನಿರ್ಮಿಸಬೇಕೆಂಬ ಇರಾದೆ ಹೊಂದಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಮಿತ್ರಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಬಿಜೆಪಿ ಈ ಹಿಂದೆ ತಾನು ಗೆದ್ದಿದ್ದ ಮೂರೂ ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಎನ್‌ಡಿಎ ಮೈತ್ರಿ ಕೂಟ ಎಲ್ಲ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿ ಕಾಂಗ್ರೆಸ್‌ಗೆ ಟಕ್ಕರ್ ಕೊಡುವ ವಿಶ್ವಾಸದಲ್ಲಿದೆ.

ಬಿಜೆಪಿ- ಜೆಡಿಎಸ್ ಮಿಳಿತದ ಪರೀಕ್ಷೆ

ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ನಡುವಿನ ಮಿಳಿತಕ್ಕೆ ಷರಾ ಬರೆಯಲಿದೆ. ಲೋಕಸಭೆ ಚುನಾವಣೆ ಬಳಿಕ ಎನ್‌ಡಿಎ ಮೈತ್ರಿಕೂಟ ಎದುರಿಸಿದ ಈ ಚುನಾವಣೆಯಲ್ಲಿ ಪ್ರಭುದ್ಧ ಮತದಾರರು ನೀಡುವ ತೀರ್ಪು ಹೇಗಿರುತ್ತದೆ ಎಂಬ ಕುತೂಹಲ ಎರಡೂ ಪಕ್ಷಗಳಿಗಿದೆ.

ಉಭಯ ಪಕ್ಷಗಳು ಜಂಟಿಯಾಗಿ ಪ್ರಚಾರ ನಡೆಸಿವೆ. ಅಭ್ಯರ್ಥಿಗಳ ಮನೆಗೇ ತೆರಳಿ ಪ್ರಚಾರಕ್ಕೆ ಸಾಥ್ ನೀಡಿವೆ. ಹೀಗಾಗಿ ಇಲ್ಲಿ ದಾಖಲಾಗುವ ಜನಾಭಿಪ್ರಾಯ ರಾಜಕೀಯವಾಗಿ ಮಹತ್ವ ಪಡೆಯಲಿದೆ.

ಈಗಾಗಲೇ ಸ್ಟಿಂಗ್ ಅಸ್ತ್ರ ಹಿಡಿದು ಆಡಳಿತ ಪಕ್ಷದ ಮೇಲೆ ಮುಗಿ ಬಿದ್ದಿರುವ ಎರಡೂ ಪಕ್ಷಗಳು ಪರಿಷತ್‌ನಲ್ಲಿ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವ ಉಮೇದಿನಲ್ಲಿವೆ.

ಈ ಹೋರಾಟ, ರಾಜಕೀಯ ಸಂಘರ್ಷ ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆಯಾಗಿದೆ ಎಂಬುದಕ್ಕೆ ಲಿತಾಂಶ ಉತ್ತರ ನೀಡಲಿದೆ.

ಕಣದಲ್ಲಿರುವ ಪ್ರಮುಖರು:

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ ಜೆಡಿಎಸ್‌ನ ಎ.ಪಿ. ರಂಗನಾಥ್ ಎನ್‌ಡಿಎ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ, ಬಿಜೆಪಿಯ ಶಶೀಲ್ ಜಿ. ನಮೋಶಿ ವಿರುದ್ಧ ಕಾಂಗ್ರೆಸಿನ ಶರಣಪ್ಪ ಮಟ್ಟೂರು ಸ್ಪರ್ಧಿಸಿದ್ದಾರೆ.

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ, ಬಿಜೆಪಿಯ ಎಸ್.ವಿ.ಸಂಕನೂರು- ಕಾಂಗ್ರೆಸ್‌ನಿಂದ ಮೋಹನ್ ಲಿಂಬಿಕಾಯಿ ನಡುವೆ ಪೈಪೋಟಿ ಇದೆ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಯುವ ಮುಖ ಕೆ.ಎಂ. ಸುರೇಶ್ ಹಾಗೂ ಕಾಂಗ್ರೆಸಿನ ಟಿ.ಆರ್. ಶಶಿಧರ್ ಸ್ಪರ್ಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net