

ಬೆಂಗಳೂರು: ಎಂ.ಎನ್. ವಿಶ್ವನಾಥ್ ಅವರ "ಭಗವದ್ಗೀತೆ ಮತ್ತು ಕ್ರೀಡಾಪಟುವಿನ ಮನಸ್ಸು' ಪುಸ್ತಕವನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಮೀಡಿಯಾ ಸೆಂಟರ್ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಪುಸ್ತಕವು ಭಗವದ್ಗೀತೆಯ ಬೋಧನೆಗಳು ಕ್ರೀಡಾಪಟುವಿನ ಮನೋಭಾವಕ್ಕೆ ಹೇಗೆ ಪ್ರಸ್ತುತವಾಗಿವೆ ಎಂಬುದನ್ನು ಪರಿಶೀಲಿಸುತ್ತದೆ. ವಿಶೇಷವಾಗಿ ಶಿಸ್ತು, ಸ್ಥೈರ್ಯ, ಏಕಾಗ್ರತೆ ಮತ್ತು ಆಂತರಿಕ ಶಕ್ತಿಯ ಮಹತ್ವವನ್ನು ಇದು ವಿವರಿಸುತ್ತದೆ. ಪುಸ್ತಕದ ಲೇಖಕ ಎಂ.ಎನ್. ವಿಶ್ವನಾಥ್ ಅವರು ಕ್ರೀಡಾ ಮಾನಸಿಕ ತರಬೇತುದಾರರಾಗಿದ್ದಾರೆ.
ಮುಖ್ಯ ಅತಿಥಿಗಳಾಗಿ ಪ್ರಧಾನ ಅರಣ್ಯ ಸಂರಕ್ಷಣಾ ಅಧಿಕಾರಿ ಹಾಗೂ ಕರ್ನಾಟಕ ಟೈಗರ್ ಪ್ರಾಜೆಕ್ಟ್ನ ನಿರ್ದೇಶಕ ಡಾ. ಪಿ. ರಮೇಶ್ ಕುಮಾರ್, ಲೇಖಕ-ಅನುವಾದಕ ಕೆ. ನಟರಾಜನ್, ಭಗವದ್ಗೀತೆಯ ಉಪನ್ಯಾಸಕಿ ಮೀರಾ ರಘೋತ್ತಮ, ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ್ತಿ ಯಶಸ್ವಿ ಘೋರ್ಪಡೆ ಮತ್ತು ಅಂತಾರಾಷ್ಟ್ರೀಯ ಟೆನಿಸ್ ಆಟಗಾರ್ತಿ ಪದ್ಮಪ್ರಿಯ ರಮೇಶ್ ಕುಮಾರ್ ಉಪಸ್ಥಿತರಿದ್ದರು.