ಕರುನಾಡ ಸಂಭ್ರಮಕ್ಕೆ ಅದ್ಧೂರಿ ತೆರೆ-karunaadu sambrama

ನಟ ಅನಿರುದ್ಧ್
ನಟ ಅನಿರುದ್ಧ್
Published on
ಬೆಂಗಳೂರು: ಗೆಲುವು ಕನ್ನಡ ಗೆಳೆಯರ ಸಮಿತಿ ಹಾಗೂ ಜಿಕೆಜಿಎಸ್ ಚಾರಿಟಬಲ್ ಟ್ರಸ್ಟ್, ವಿಜಯವಾಣಿ ಸಹಯೋಗದೊಂದಿಗೆ ಶ್ರೀನಿವಾಸನಗರದ ಶಂಕರ್‌ನಾಗ್ ವೃತ್ತ ಸಮೀಪದ ಕೆಂಪೇಗೌಡ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಕರುನಾಡ ಸಂಭ್ರಮ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ಸಮಾಪ್ತಿಗೊಂಡಿದೆ.
ನಟ ವಿಷ್ಣುವರ್ಧನ್‌ಗೆ ಕೊಡಮಾಡುವ ಮರಣೋತ್ತರ ಕನ್ನಡ ಕಲಾಭೂಷಣ ಗೌರವವನ್ನು ಅವರ ಅಳಿಯ ನಟ ಅನಿರುದ್ಧ ಅವರಿಗೆ ಪ್ರದಾನ ಮಾಡಲಾಯಿತು. ಹಿರಿಯ ನಟಿ ತಾರಾಗೆ ಕರುನಾಡ ಸಂಭ್ರಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಗಾಯಕ ರಾಜೇಶ್ ಕೃಷ್ಣನ್ ತಂಡದವರು ನಡೆಸಿಕೊಟ್ಟ ಸಂಗೀತ ಸಂಜೆ, ಕಿರುತರೆ ನಟ-ನಟಿಯರಿಂದ ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ವಾರಾಂತ್ಯ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಕಾರ್ಯಕ್ರಮದ ಮೊದಲ ದಿನದಂದು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಚಿತ್ರ ಗೀತೆಗಳಿಗೆ ಹಲವು ಮಕ್ಕಳು ನೃತ್ಯ ಪ್ರಚುರಪಡಿಸಿ ಸಾವಿರಾರು ಜನರಿಗೆ ಮನರಂಜನೆ ಒದಗಿಸಿದ್ದರು. ಪಾಲಕರು ತಮ್ಮ ಮಕ್ಕಳ ನೃತ್ಯ ಪ್ರದರ್ಶವನ್ನು ನೋಡಿ ಹರ್ಷವ್ಯಕ್ತಪಡಿಸಿದರು. 2 ಮತ್ತು 3ನೇ ದಿನದಂದು ರಾಘವೇಂದ್ರ ವೈಭವೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವವನ್ನು ಸಾವಿರಾರು ಸಭಿಕರು ಕಣ್ತುಂಬಿಸಿಕೊಂಡಿದ್ದರು. ಗಾಯಕಿ ಶಮಿತಾ ಮಲ್ನಾಡ್ ತಂಡದವರು ನಡೆಸಿಕೊಟ್ಟ ಸಂಗೀತ ಸುಧೆಗೆ ಮನಸೋತರು.
ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಮಾಜಿ ಶಾಸಕ ಅಶೋಕ್ ಖೇಣಿ, ಟ್ರಸ್ಟ್‌ನ ಗೌರವಾಧ್ಯಕ್ಷ ಡಿ. ಶಿವಲಿಂಗಯ್ಯ, ಅಧ್ಯಕ್ಷ ಡಿ. ಕೃಷ್ಣೇಗೌಡ, ಉಪಾಧ್ಯಕ್ಷ ಡಿ.ಎನ್. ರಮೇಶ್, ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ಪ್ರಶಾಂತ್, ಮುಖ್ಯ ಕಾರ್ಯದರ್ಶಿ ವಿ.ಮಂಜುನಾಥ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net