ಜನರ ಸಮಸ್ಯೆ ಬಗೆಹರಿಸಲು ಜನಸ್ಪಂದನ ಕಾರ್ಯಕ್ರಮ ಅಗತ್ಯ: ಎಸ್.ಟಿ.ಸೋಮಶೇಖರ್

ಯಶವಂತಪುರ ಕ್ಷೇತ್ರದ ಶಿವನಪಾಳ್ಯ ವಾರ್ಡಿನ ವಳಗೆರಹಳ್ಳಿ ಸಾರ್ವಜನಿಕ ಆಟದ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಎಸ್. ಟಿ. ಸೋಮಶೇಖರ್ ಭಾಗವಹಿಸಿದರು
ಯಶವಂತಪುರ ಕ್ಷೇತ್ರದ ಶಿವನಪಾಳ್ಯ ವಾರ್ಡಿನ ವಳಗೆರಹಳ್ಳಿ ಸಾರ್ವಜನಿಕ ಆಟದ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಎಸ್. ಟಿ. ಸೋಮಶೇಖರ್ ಭಾಗವಹಿಸಿದರು
Published on
ಜನರ ಸಮಸ್ಯೆ ಬಗೆಹರಿಸಲು ಜನಸ್ಪಂದನ ಕಾರ್ಯಕ್ರಮ ಅಗತ್ಯ: ಎಸ್.ಟಿ.ಸೋಮಶೇಖರ್
ಯಶವಂತಪುರ: ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಒಂದೇ ವೇದಿಕೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಜನರ ಸಮಸ್ಯೆಗಳು ಸ್ಥಳದಲ್ಲೇ ಪರಿಹಾರ ಒದಗಿಸುವ ದೃಷ್ಟಿಯಿಂದ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್. ಟಿ. ಸೋಮಶೇಖರ್ ಹೇಳಿದರು.
ಯಶವಂತಪುರ ಕ್ಷೇತ್ರದ ಶಿವನಪಾಳ್ಯ ವಾರ್ಡಿನ ವಳಗೆರಹಳ್ಳಿ ಸಾರ್ವಜನಿಕ ಆಟದ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಲವು ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಗಳಿಂದ ಸಾರ್ವಜನಿಕರು ಸಮಸ್ಯಗಳಿಗೆ ಸೌಜನ್ಯವಾಗಿ ಸ್ಪಂದಿಸಿ ಸಾರ್ವಜನಿಕರ ಸಮಸ್ಯೆ ನಿವಾರಣೆಗೆ ಪರಿಹಾರ ಕೊಡಬೇಕು. ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ರೈಲ್ವೆ ಕೇಂದ್ರ ರಾಜ್ಯ ಸಚಿವ ವಿ.ಸೋಮಣ್ಣ ರೈಲ್ವೆ ಇಲಾಖೆ ವತಿಯಿಂದ ಅಂಡರ್ ಪಾಸ್ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರ ಎಂದರು.
ಯಶವಂತಪುರ ಕ್ಷೇತ್ರಕ್ಕೆ ಶಾಶ್ವತವಾದ ಯೋಜನೆಗಳಾದ ಸುಮಾರು 41ಕೋಟಿ ಅನುದಾನದಲ್ಲಿ ಕೆಂಗೇರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣ, ಅಗ್ನಿ ಶಾಮಕ ದಳ ಸ್ಟೇಷನ್ ನಿರ್ಮಾಣ, 209ಕೋಟಿ ರೂ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, 5ನೇ ಹಂತದ ಕಾವೇರಿ ಕುಡಿಯುವ ನೀರು ಪೂರೈಕೆ, ಹೇರೋ ಹಳ್ಳಿಯಲ್ಲಿ ಡಯಾಲಿಸಿಸ್ ಕೇಂದ್ರ ನಿರ್ಮಾಣ, ಕೊಮ್ಮಘಟ್ಟ ರಸ್ತೆಯಲ್ಲಿ ಮಹಿಳೆಯರ ಹೆರಿಗೆ ಆಸ್ಪತ್ರೆ ನಿರ್ಮಾಣ, ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ಸಂಪರ್ಕ ಕಲ್ಪಿಸುವ ಎಸ್.ಎಂ.ಕೃಷ್ಣ ರಸ್ತೆ ನಿರ್ಮಾಣ., ಹೀಗೆ ಇನ್ನು ಹತ್ತು ಹಲವಾರು ಶಾಶ್ವತ ಯೋಜನೆಗಳನ್ನು ಯಶವಂತಪುರ ಕ್ಷೇತ್ರಕ್ಕೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಬಿಎ ಸಂಭಾವ್ಯ ಅಭ್ಯರ್ಥಿ ಸವಿತಾ ಮಹೇಶ್ ಮಾತನಾಡಿ ಸಾರ್ವಜನಿಕರು ಮತ್ತು ಹಿರಿಯ ನಾಗರಿಕರಿಗೆ ದೊರೆಯಬೇಕಾದ ಮೂಲಭೂತ ಸೌಕರ್ಯದ ಜೊತೆಗೆ ಸರ್ಕಾರದಿಂದ ದೊರೆಯುವಂತ ಸೌಲಭ್ಯಗಳನ್ನು ನೇರವಾಗಿ ದೊರಕಿಸಿಕೊಡುವುದೇ ನನ್ನ ಮೂಲ ಧ್ಯೇಯ ಆಗಿದೆ ಎಂದರು.ಶಿವನ ಪಾಳ್ಯ ವಾರ್ಡಿನ ಜಿಬಿಎ ಅಭ್ಯರ್ಥಿ ಆಕಾಂಕ್ಷಿ ಸವಿತಾ ಮಹೇಶ್ ಜನಸ್ಪಂದನ ಕಾರ್ಯಕ್ರಮದ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ನೂರಾರು ಮಂದಿ ಇದರ ಸದುಪಯೋಗ ಪಡಿಸಿಕೊಂಡರು.
ಬೆಂಗಳೂರು ಜಿಲ್ಲಾಧಿಕಾರಿ ಶಂಕರ್, ಜಂಟಿ ಆಯುಕ್ತರಾದ ಆರತಿಆನಂದ್, ಎಸಿಪಿ ಸತ್ಯಾವತಿ, ಶಿವನ ಪಾಳ್ಯ ವಾರ್ಡ್ ಅಧ್ಯಕ್ಷ ಕೆ.ವೈ.ಕೃ?್ಣ, ರಾಮೋ ಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್.ಜಿ, ಹನುಮಂತೇಗೌಡ, ಆರ್.ಪ್ರಸಾದ್ ಕುಮಾರ್, ಚೇತನ್ ಗೌಡ, ದೇವರಾಜ್, ಬೆಂಗಳೂರು ಜಲಮಂಡಳಿ ಎಇಇ ದೀಪಕ್, ಬಿಬಿಎಂಪಿ ಇಇ ನಾಗರಾಜ್, ಘನತ್ಯಾಜ್ಯ ಎಇಇ ಸಿದ್ದರಾಜೇಗೌಡ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net