

ಬೆಂಗಳೂರು: ಅಪಘಾತ ಎಸಗಿ ಸವಾರನೊಬ್ಬನ ಸಾವಿಗೆ ಕಾರಣರಾಗಿದ್ದ ಕ್ರೇನ್ ಚಾಲಕನಿಗೆ ಜೆಎಂಎ್ಸಿ 3ನೇ ಸಂಚಾರ ನ್ಯಾಯಾಲಯ 6 ಸಾವಿರ ರೂ. ದಂಡ ಜತೆಗೆ 1 ವರ್ಷ 3 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ನೂರುಲ್ಲಾ (39) ಶಿಕ್ಷೆಗೆ ಒಳಗಾದ ಚಾಲಕ. ಈತ ನಿರ್ಲಕ್ಷ್ಯತನದಿಂದ ಕ್ರೇನ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಟಿ.ಆರ್. ರಾಜೀವ್ (21) ಮೃತ ಪಟ್ಟಿದ್ದ.
ಬಿಎಂಟಿಸಿ ಚಾಲಕನಿಗೆ 45 ದಿನ ಜೈಲು:
ಅಪಘಾತದಲ್ಲಿ ಸವಾರನೊಬ್ಬನಿಗೆ ತೀವ್ರ ಗಾಯಗೊಳಿಸಿದ್ದ ಬಿಎಂಟಿಸಿ ಬಸ್ ಚಾಲಕನಿಗೆ ಜೆಎಂಎ್ಸಿ 3ನೇ ಸಂಚಾರ ನ್ಯಾಯಾಲಯ, 11 ಸಾವಿರ ದಂಡದ ಜತೆಗೆ 45 ದಿನ ಜೈಲು ಶಿಕ್ಷೆ ನೀಡಿದೆ.
ಬಿಎಂಟಿಸಿ ಬಸ್ ಚಾಲಕ ಕೃಷ್ಣಮೂರ್ತಿ (43) ಶಿಕ್ಷೆಗೆ ಒಳಗಾದ ವ್ಯಕ್ತಿ. ಈತನ ವಿರುದ್ಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಅಯ್ಯಪ್ಪ ಟೆಂಪಲ್ ರಸ್ತೆಯಲ್ಲಿ ಬಿಎಂಟಿಸಿ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಸವಾರ ಪ್ರಹ್ಲಾದ್ ಗಂಭೀರ ಗಾಯಗೊಂಡಿದ್ದ.
ಎರಡು ಪ್ರಕರಣಗಳ ತನಿಖಾಧಿಕಾರಿ ಬಿ. ಚಿದಾನಂದ ಅವರು, ಅಪರಾಧಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಆರೋಪ ಸಾಭೀತಾದ ಹಿನ್ನೆಲೆ ನ್ಯಾಯಾಧೀಶರಾದ ಮಂಜು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ತರ ಪರ ಸರ್ಕಾರಿ ಅಭೀಯೋಜಕಿ ಚಂದ್ರಕಲಾ ವಾದ ಮಂಡಿಸಿದ್ದರು.