

ಪ್ರಮುಖ ಮುಖ್ಯಾಂಶಗಳು
ಮಾನ್ಯತಾ ಟೆಕ್ ಪಾರ್ಕ್ ಬಳಿ ರಾಜಕಾಲುವೆ ಹರಿವಿನ ಬಗ್ಗೆ ತಗಾದೆ ಇರುವುದು ನಿಜ. ಈ ಸಮಸ್ಯೆ ನಿವಾರಣೆಗೆ ವಿವಿಧ ಹಂತಗಳಲ್ಲಿ ಚರ್ಚೆ ನಡೆಸಿ ಪರಿಹಾರ ಕೈಗೊಳ್ಳಲಾಗುತ್ತಿದೆ. ಸದ್ಯ ರಾಜಕಾಲುವೆ ಪಥ ಬದಲಾವಣೆಗೆ ಒಪ್ಪಿಗೆ ನೀಡಿಲ್ಲ. ಟೆಕ್ ಪಾರ್ಕ್ ಕೆಐಎಡಿಬಿ ವ್ಯಾಪ್ತಿಗೆ ಬರಲಿದ್ದು, ಆ ಸಂಸ್ಥೆ ಮತ್ತು ನಗರ ಜಿಲ್ಲಾಧಿಕಾರಿ ಸಲಹೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ಉತ್ತರ ಪಾಲಿಕೆಯ ಪಾತ್ರ ಇಲ್ಲ. ಇದರ ಹೊರತಾಗಿಯೂ ಮುಂಬರುವ ಮಳೆಗಾಲದಲ್ಲಿ ಮಾನ್ಯತಾ ಟೆಕ್ ಪಾರ್ಕ್ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗದಂತೆ ನಿಗಾ ವಹಿಸಲಾಗುವುದು.
- ಪಿ.ಸುನೀಲ್ ಕುಮಾರ್, ಉತ್ತರ ನಗರ ಪಾಲಿಕೆ ಆಯುಕ್ತ