ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಹ್ವಾನ

ಗೋವಾದಲ್ಲಿ ಆಯೋಜಿಸಿರುವ 4ನೇ ಆವತ್ತಿಯ ಭಾರತ ಇಂಧನ ಸಪ್ತಾಹಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ ಅವರು ಕರ್ನಾಟಕ ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಪ್ರಮುಖ ಕಂಪನಿಗಳಿಗೆ ಆಹ್ವಾನ ನೀಡಿದರು. ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯ ದಿವಾಕರ್‌ರಾವ್, ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್.ಎಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಬಿ.ಆರ್, ಯೋಜನಾ ಸಲಹೆಗಾರ ಪ್ರಸಾದ್ ರಬ್ಬಪ್ರಗಡ ಮುಂತಾದ ಅಧಿಕಾರಿಗಳು ಇದ್ದರು.
ಗೋವಾದಲ್ಲಿ ಆಯೋಜಿಸಿರುವ 4ನೇ ಆವತ್ತಿಯ ಭಾರತ ಇಂಧನ ಸಪ್ತಾಹಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ ಅವರು ಕರ್ನಾಟಕ ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಪ್ರಮುಖ ಕಂಪನಿಗಳಿಗೆ ಆಹ್ವಾನ ನೀಡಿದರು. ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯ ದಿವಾಕರ್‌ರಾವ್, ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್.ಎಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಬಿ.ಆರ್, ಯೋಜನಾ ಸಲಹೆಗಾರ ಪ್ರಸಾದ್ ರಬ್ಬಪ್ರಗಡ ಮುಂತಾದ ಅಧಿಕಾರಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ದೇಶದ ಪ್ರತಿನಿಧಿಗಳ ಜತೆ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ.ಸುಧೀಂದ್ರ ಚರ್ಚೆ
  • ಗೋವಾದ ಒಎನ್‌ಜಿಸಿಯಲ್ಲಿ ಮಳಿಗೆಗಳ ವೀಕ್ಷಣೆ
ಗೋವಾ: ಇಲ್ಲಿನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಆವರಣದಲ್ಲಿ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮಂತ್ರಾಲಯದಿಂದ ಆಯೋಜಿಸಲಾಗಿರುವ 4ನೇ ಆವೃತ್ತಿಯ ಭಾರತ ಇಂಧನ ಸಪ್ತಾಹಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ ಅವರು ಕರ್ನಾಟಕ ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಪ್ರಮುಖ ಕಂಪನಿಗಳಿಗೆ ಆಹ್ವಾನ ನೀಡಿದರು.
ವಿವಿಧ ದೇಶಗಳ ಕಂಪನಿಗಳು ನಿರ್ಮಿಸಿರುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿಗೆ ಪ್ರಮುಖವಾಗಿ ಜೈವಿಕ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಮಳಿಗೆಗಳಿಗೆ ಭೇಟಿ ನೀಡಿ ವಿಚಾರ ವಿನಿಮಯ ಮಾಡಿಕೊಂಡರು.
ಪ್ರಮುಖ ಕಂಪನಿಗಳಾದ ಪ್ಲಾನೆಟ್ ಪಾಸಿಟಿವ್ ಪವರ್, ಹೀರೋ ಫ್ಯೂಚರ್ ಎನರ್ಜಿಸ್ (ರಿನೀವಬಲ್ ಎನರ್ಜಿ ವೆಂಚರ್ ಆಫ್ ದ ಹೀರೋ ಗ್ರೂಪ್), ಕೇಂದ್ರ ಸರ್ಕಾರ ಸೌಮ್ಯದ ಗೇಲ್ (ಜಿಎಐಎಲ್) ಲಿಮಿಟೆಡ್, ಬ್ರೂನಿ ದರುಸಲಾಂನ ದಾತೋ ಆಜ್ಮಿ ಹನಿಫಾ, ಒಏನ್‌ಜಿಸಿ ವಿದೇಶ್ ಲಿಮಿಟೆಡ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ನೂತನ ಮತ್ತು ಮರು ಉತ್ಪಾದಿಸಲ್ಪಡುವ ಇಂಧನಗಳ ಪೈಕಿ ಜೈವಿಕ ಇಂಧನ ಕ್ಷೇತ್ರದಲ್ಲಿ ಅಪಾರ ಬಂಡವಾಳ ಹೂಡಿಕೆಗಾಗಿ ಪೂರಕ ವಾತಾವರಣ ಸೃಜನೆಗೆ ಕೈಗೊಂಡಿರುವ ಕಾರ್ಯಯೋಜನೆಗಳ ಕುರಿತು ಬೇರೆ ಬೇರೆ ದೇಶಗಳ ಕೈಗಾರಿಕಾ ಪ್ರತಿನಿಧಿಗಳಿಗೆ ವಿವರಿಸಿದರು.
ಮಧ್ಯಮ ಮತ್ತು ಬಹತ್ ಕೈಗಾರಿಕೆಗಳ ಸಚಿವಾಲಯದಿಂದ ಕೈಗಾರಿಕಾ ನೀತಿ 2025-2030 ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಮತ್ತು ಐಟಿಬಿಟಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಶಯದಂತೆ ನೂತನ ಜೈವಿಕ ಇಂಧನ ನೀತಿ ರಚನೆ ಹಾಗೂ ಅನುಷ್ಟಾನಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಕಂಪನಿಗಳಿಗೆ ಮನದಟ್ಟು ಮಾಡಿಕೊಟ್ಟರು.
ಮಂಡಳಿಯ ಅಧ್ಯಕ್ಷರು ಈಗಾಗಲೇ ರಾಜ್ಯ ಸರ್ಕಾರ ಜೈವಿಕ ಇಂಧನಗಳ ಮಾರಾಟ ಮಳಿಗೆಗಳ ಆರಂಭಕ್ಕೆ ಪರವಾನಗಿ ನೀಡುವ ಕುರಿತು ಹೊರಡಿಸಿರುವ ಆದೇಶ, ಮೂಲ ಸೌಕರ್ಯಗಳನ್ನು ಒದಗಿಸಲು ಕೈಗೊಂಡಿರುವ ಕ್ರಮಗಳು ಹಾಗೂ ಜೈವಿಕ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ವಾಡಿ ಜೈವಿಕ ಇಂಧನಗಳ ಉತ್ಪಾದನೆಯಿಂದ ಕರ್ನಾಟಕ ರಾಜ್ಯ ಇಂಧನ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿನ ಚಿಂತನೆಗಳ ಕುರಿತು ಚರ್ಚಿಸಿದ ಸಂದರ್ಭದಲ್ಲಿ ಹಲವಾರು ಕಂಪನಿಗಳ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಕೂಡಲೇ ಮಂಡಳಿಯ ಕಚೇರಿಗೆ ಭೇಟಿ ನೀಡಿ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಆಸಕ್ತಿ ತೋರಿದರು. ಮುಖ್ಯವಾಗಿ ಗೌರ್ನಮೆಂಟ್ ಆಫ್ ರಿಪಬ್ಲಿಕ್ ವನ್ಯೂಟ್ ಸಚಿವರಾದ ರಾಲ್ಫ್ ರೆಜಿನ್ ಹಾಗೂ ಡಾ.ಸನ್ ವನ್ಯೂಟ್ ಟ್ರೇಡ್ ಕಮಿಷನರ್ ಫಾರ್ ಯುನೈಟೆಡ್ ಅರಬ್ ಎಮಿರೇಟ್ಸ್ ಕೂಡಲೇ ಒಡಂಬಡಿಕೆ ಹೊಂದಲು ಅವರ ದೇಶಕ್ಕೆ ಭೇಟಿ ನೀಡಲು ಕೋರಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ದಿವಾಕರ್‌ರಾವ್, ವ್ಯವಸ್ಥಾಪಕ ನಿರ್ದೇಶಕರಾದ ಶಿವಶಂಕರ್.ಎಲ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಲೋಹಿತ್ ಬಿ.ಆರ್, ಯೋಜನಾ ಸಲಹೆಗಾರರಾದ ಪ್ರಸಾದ್ ರಬ್ಬಪ್ರಗಡ, ಮುಂತಾದ ಅಧಿಕಾರಿಗಳು ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net