ಜಾಗತಿಕ ಅನಿಶ್ಚಿತತೆ ನಡುವೆಯೂ ಭಾರತ ಸದೃಢ

ಸಚಿವ ಹರ್ದೀಪ್ ಸಿಂಗ್ ಪುರಿ
ಸಚಿವ ಹರ್ದೀಪ್ ಸಿಂಗ್ ಪುರಿ
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿಕೆ
  • 4ನೇ ಆವೃತ್ತಿಯ ಇಂಧನ ಸಪ್ತಾಹ ಯಶಸ್ವಿ
ಗೋವಾ: ಜಾಗತಿಕ ಅನಿಶ್ಚಿತತೆ ನಡುವೆಯೂ ಭಾರತವು ಇಂಧನದ ಲಭ್ಯತೆ, ಕೈಗೆಟುಕುವಿಕೆ ಮತ್ತು ಸುಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳುವತ್ತ ಮುಂದಡಿ ಇಟ್ಟಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.
ಇಲ್ಲಿನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಆವರಣದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಭಾರತ ಇಂಧನ ಸಪ್ತಾಹದ ಸವಾರೋಪ ಸವಾರಂಭದಲ್ಲಿ ಶುಕ್ರವಾರ ವಾತನಾಡಿ, ಭಾರತದ ಜಾಗತಿಕ ಸ್ಥಾನವನ್ನು ಪ್ರಸ್ತಾಪಿಸಿದ ಸಚಿವರು, ದೇಶವು ಇಂದು ಮೂರನೇ ಅತಿದೊಡ್ಡ ಇಂಧನ ಗ್ರಾಹಕ. ನಾಲ್ಕನೇ ಅತಿದೊಡ್ಡ ಸಂಸ್ಕರಣಾಗಾರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಅಗ್ರ ರಫ್ತುದಾರರಲ್ಲಿ ಒಂದಾಗಿದೆ ಎಂದರು.
ಜಾಗತಿಕ ಇಂಧನ ವಾರುಕಟ್ಟೆಗಳಲ್ಲಿ ಆಗುತ್ತಿರುವ ನಿರಂತರ ಭೌಗೋಳಿಕ ರಾಜಕೀಯ ಏರಿಳಿತಗಳನ್ನು ಎದುರಿಸಲು ಭಾರತ ಸದೃಢ ಸನ್ನದ್ಧತೆಯನ್ನು ಪ್ರದರ್ಶಿಸಿದೆ ಮತ್ತು ಅಂತಾರಾಷ್ಟ್ರೀಯ ಇಂಧನ ಚರ್ಚೆಯಲ್ಲಿ ಕೇಂದ್ರ ಸ್ಥಾನವನ್ನು ಪಡೆಯುವ ಪ್ರಯತ್ನವನ್ನು ಮುಂದುವರಿಸುತ್ತದೆ ಎಂದು ಹೇಳಿದರು.
ಭಾರತದ ಇಂಧನ ಕಾರ್ಯತಂತ್ರವು ವೈವಿಧ್ಯೀಕರಣ, ಸ್ಥಿತಿಸ್ಥಾಪಕತ್ವ ಮತ್ತು ಭವಿಷ್ಯದ ದಷ್ಟಿಯ ಪರಿವರ್ತನೆಗಳಲ್ಲಿ ನಿರೂಪಿಸಲ್ಪಟ್ಟಿದೆ ಎಂದು ಬಲವಾಗಿ ಪ್ರತಿಪಾದಿಸಿದರು.
ನಾವು ಸತತ ಭೌಗೋಳಿಕ ರಾಜಕೀಯ ಆಘಾತಗಳನ್ನು ಚೆನ್ನಾಗಿ ನಿಭಾಯಿಸಿದ್ದೇವೆ. ಪೂರೈಕೆ ಮೂಲಗಳ ವೈವಿಧ್ಯೀಕರಣ ಮತ್ತು ಶುದ್ಧ ಇಂಧನಗಳ ಕಡೆಗೆ ತ್ವರಿತ ಪರಿವರ್ತನೆಯ ಮೂಲಕ ಪ್ರತಿಯೊಂದು ಸವಾಲನ್ನು ಅವಕಾಶವಾಗಿ ಪರಿವರ್ತಿಸಿದ್ದೇವೆ ಎಂದು ಹೇಳಿದರು.
ಸಾಂಪ್ರದಾಯಿಕ ಇಂಧನಗಳಲ್ಲಿ ನಿರಂತರ ಹೂಡಿಕೆಗಳ ಜತೆಗೆ ಕಂಪ್ರೆಸ್ಡ್ ಜೈವಿಕ ಅನಿಲ (ಸಿಬಿಜಿ), ಹಸಿರು ಹೈಡ್ರೋಜನ್ ಮತ್ತು ಸ್ಥಳೀಯ ಶುದ್ಧ ಇಂಧನ ತಂತ್ರಜ್ಞಾನಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ ಎಂದರು.
ಭಾರತವು ತನ್ನ ನಾಗರಿಕರನ್ನು ಬೆಲೆಗಳ ಏರಿಕೆಯಿಂದ ಯಶಸ್ವಿಯಾಗಿ ರಕ್ಷಿಸಿದೆ. ಜಾಗತಿಕ ಬಿಕ್ಕಟ್ಟನ್ನು ಎಂದಿಗೂ ಗ್ರಾಹಕರಿಗೆ ವರ್ಗಾಯಿಸಲಾಗಿಲ್ಲ. ಭಾರತವು ಇಂದು ವಿಶ್ವದ ಅತ್ಯಂತ ಕಡಿಮೆ ಇಂಧನ ಬೆಲೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿಯೂ ನಿರಂತರ ಪೂರೈಕೆಯನ್ನು ಕಾಯ್ದುಕೊಳ್ಳಲಾಗಿದೆ ಎಂದು ಹೇಳಿದರು.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಡಾ.ನೀರಜ್ ಮಿತ್ತಲ್ ವಾತನಾಡಿ, 2030ರ ವೇಳೆಗೆ ಶೇ.5 ರಷ್ಟು ಮಿಶ್ರಣವನ್ನು ಸಾಧಿಸುವ ಗುರಿಯೊಂದಿಗೆ, ಸಿಬಿಜಿಯಲ್ಲಿನ ತನ್ನ ಗುರಿ ತಲುಪುವತ್ತ ಭಾರತವು ಉತ್ತಮ ಹಾದಿಯಲ್ಲಿದೆ ಎಂದು ತಿಳಿಸಿದರು.
ನಾಲ್ಕು ದಿನಗಳ ಸಪ್ತಾಹಕ್ಕೆ ತೆರೆ: ಇಂಧನ ಭದ್ರತೆ, ಪೆಟ್ರೋಲಿಯಂ ಉತ್ಪನ್ನ ವಲಯದಲ್ಲಿನ ಹೂಡಿಕೆಯನ್ನು ಉತ್ತೇಜಿಸಲು ಮತ್ತು ಹಸಿರು ಇಂಧನ ಪರಿವರ್ತನೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಇಲ್ಲಿನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಆವರಣದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಭಾರತ ಇಂಧನ ಸಪ್ತಾಹ ಶುಕ್ರವಾರ ಯಶಸ್ವಿಯಾಗಿ ತೆರೆ ಕಂಡಿತು. ಸಪ್ತಾಹದಲ್ಲಿ ಸುವಾರು 120 ದೇಶಗಳ 65 ಸಾವಿರಕ್ಕೂ ಪೆಟ್ರೋಲಿಯಂ ವಲಯದ ಹೆಚ್ಚಿನ ಪ್ರತಿನಿಧಿಗಳು ಹಾಗೂ ತಂತ್ರಜ್ಞರು ಪಾಲ್ಗೊಂಡು ಹೂಡಿಕೆ ಹಾಗೂ ಆವಿಷ್ಕಾರ ಸಂಬಂಧ ವಿಚಾರ ಮಂಥನ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net