

ಬೆಂಗಳೂರು: ಶ್ರೀ ಲಕ್ಷ್ಮೀ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಅಧೀನದಲ್ಲಿರುವ ಬೆಂಗಳೂರಿನ ಶ್ರೀ ಲಕ್ಷ್ಮೀ ಕಾನೂನು ಕಾಲೇಜು 3 ವರ್ಷದ ಎಲ್.ಎಲ್.ಬಿ.ಯನ್ನು 5 ವರ್ಷದ ಸಮಗ್ರ ಬಿ.ಎ. ಎಲ್.ಎಲ್.ಬಿ.ವರಗೆ ವಿಸ್ತರಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದ್ದು,ಕಾನೂನು ಅಧ್ಯಯನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ವಿಶ್ರಾಂತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದರು.
ಲಕ್ಷ್ಮೀ ಲಾ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಶಿಲಾಶಾಸನ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.
ಕಾನೂನು ಅಧ್ಯಯನ ಮುಕ್ತ ಹಾಗೂ ವಿಶ್ಲೇಷಣಾತ್ಮಕ ಮನೋಭಾವದಿಂದ ತೆಗೆದುಕೊಂಡು ವಿದ್ಯಾರ್ಥಿಗಳು ನಿಯಮಿತ ಹಾಜರಾತಿ, ಏಕಾಗ್ರತೆ ಮತ್ತು ಕಾನೂನು ಕಲಿಕೆಯಲ್ಲಿನ ನಿಜವಾದ ಆಸಕ್ತಿ ತೊರಬೇಕು. ವಿದ್ಯಾರ್ಥಿಗಳು ಪ್ರತಿಯೊಂದು ಗಂಟೆಯನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ಸಮಯವನ್ನು ಕಲಿಕೆ, ವೈಯಕ್ತಿಕ ಅಭಿವೃದ್ಧಿ ಹಾಗೂ ಕಾನೂನು ವೃತ್ತಿಯಲ್ಲಿ ಜವಾಬ್ದಾರಿಯುತ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀ ಲಕ್ಷ್ಮೀ ಕಾನೂನು ಕಾಲೇಜಿನ ಬೆಳವಣಿಗೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಗುಣಮಟ್ಟದ, ಪ್ರಾಯೋಗಿಕ ಹಾಗೂ ಮೌಲ್ಯಾಧಾರಿತ ಕಾನೂನು ಶಿಕ್ಷಣವನ್ನು ಒದಗಿಸುವ ಸಂಸ್ಥೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ ಎಂದರು. ಶ್ರೀ ಲಕ್ಷ್ಮೀ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಅಧ್ಯಕ್ಷ ಡಾ. ಎನ್. ರಾಮಚಂದ್ರಯ್ಯ, ಸಿವಿಲ್ ನ್ಯಾಯಾಧೀಶ ಶ್ರೀನಾಥ್ ಕೆ., ಸಿಇಒ ಶಿವಬಸವಯ್ಯ, ಶ್ರೀ ಲಕ್ಷ್ಮೀ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ಸ್ಮಿತಾ ಆರ್. ಚಂದ್ರ, ಕಾರ್ಯದರ್ಶಿ ಡಾ. ದರ್ಶನ್ ಎಲ್. ಗೌಡ, ನಿರ್ದೇಶಕರಾದ ಪ್ರೊಫೆಸರ್ ಕೆ. ನಾಗಿರೆಡ್ಡಿ ಹಾಗೂ ಶ್ರೀ ಲಕ್ಷ್ಮೀ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಕಾವ್ಯ ಎಂ. ಉಪಸ್ಥಿತರಿದ್ದರು.