ಮೆಕಾನಿಕಲ್ ಸ್ವೀಪಿಂಗ್ ಯಂತ್ರಗಳ ವರ್ಕಿಂಗ್ ಕಂಡಿಷನ್, ರಸ್ತೆ ಸ್ವಚ್ಛತಾ ಸಾಮರ್ಥ್ಯ, ತಾಂತ್ರಿಕ ವೈಶಿಷ್ಟ್ಯಗಳು ಹಾಗೂ ಪಾಲಿಕೆಯ ಸ್ವಚ್ಛತಾ ಕಾರ್ಯಗಳಿಗೆ ಯಂತ್ರವು ಅಗತ್ಯ ಮಟ್ಟಿಗೆ ಸಹಕಾರಿಯಾಗುತ್ತದೆಯೇ ಎಂಬ ಅಂಶಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಲಾಯಿತು. ರಸ್ತೆಯ ವಿವಿಧ ಪರಿಸ್ಥಿತಿಗಳಲ್ಲಿ ಯಂತ್ರದ ಕಾರ್ಯಕ್ಷಮತೆ, ಸ್ವಚ್ಛತಾ ಗುಣಮಟ್ಟ, ಕಾರ್ಯಾಚರಣೆಯ ಅನುಕೂಲತೆ ಹಾಗೂ ನಿರ್ವಹಣಾ ಅಂಶಗಳನ್ನು ಪರಿಗಣಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಇದೇ ರೀತಿಯ ಇತರ ಸ್ವೀಪಿಂಗ್ ಯಂತ್ರಗಳೊಂದಿಗೆ ಫೀಲ್ಡ್ ಟ್ರಯಲ್ಅನ್ನು ವಿಶ್ಲೇಷಣೆಗೆ ಒಳಪಡಿಸಲಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.