ನಿನ್ನ ಹಸಿವು ನೋಡಿ ಬೇಸರವಾಯಿತು: ಊಬರ್ ಚಾಲಕನ ಮಾನವೀಯತೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಪ್ರಯಾಣಿಕ! Hungry

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬೆಂಗಳೂರು: ಕ್ಯಾಬ್​ ಚಾಲಕನೊಬ್ಬ ತನ್ನ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯೊಬ್ಬಳು ಹಸಿವಿನಿಂದ ಪರಿತಪಿಸುತ್ತಿದ್ದನ್ನು ಗಮನಿಸಿ ಆಕೆಗೆ ಆಹಾರವನ್ನು ನೀಡಿ, ಆಕೆಯ ಬಯಕೆಯನ್ನು ನೀಗಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸಧ್ಯ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್​ ಆಗಿದೆ.
ಪ್ರಯಾಣಿಕಳಾದ ಯೋಗಿತಾ ತಮ್ಮ ಜೀವನದ ಅತ್ಯಂತ ಪ್ರೀತಿಯ ಅನುಭವಗಳಲ್ಲಿ ಒಂದು ಎಂದು ವಿವರಿಸುವ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ದೀರ್ಘ ದಿನದ ಶೂಟಿಂಗ್​ ನಂತರ, ಆಕೆ ದಣಿದ ಭಾವನೆಯಿಂದ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಇಡೀ ದಿನ ಏನು ಆಹಾರ ಸೇವಿಸದೆ ಕೆಲಸವನ್ನು ಮಾಡಿದ್ದೇನೆ. ಹಾಗೆಯೇ ವಿಮಾನವು 2 ಗಂಟೆಗೆ ನಿಗದಿಯಾಗಿದ್ದರಿಂದ ಮತ್ತು ವಿಮಾನ ನಿಲ್ದಾಣವು ನಗರದಿಂದ ದೂರವಿದ್ದರಿಂದ, ಊಟ ಮಾಡಲು ಸಮಯ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಯೋಗಿತಾ ಪ್ರಕಾರ, ಪ್ರಯಾಣದ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಕಾರು ನಿಂತಿತು. ಚಾಲಕನಿಗೆ ಶೌಚಾಲಯಕ್ಕೆ ಹೋಗಲು ವಿರಾಮ ಬೇಕು ಹಾಗಾಗಿ ಕಾರಿನಲ್ಲಿಯೇ ಇರಿ ಎಂದು ಚಾಲಕ ಕೆಳಗಿಳಿದಿದ್ದಾನೆ. ನಂತರ ಆತ ಸ್ಯಾಂಡವೀಚ್​ ಪೆಟ್ಟಿಗೆಯೊಂದಿಗೆ ಪ್ರಯಾಣಿಕಳತ್ತ ಆಗಮಿಸಿ ಆಕೆಗೆ ತಿನ್ನಲು ನೀಡಿದ್ದಾನೆ.
ಇನ್ನು ಆಕೆಯೊಂದಿಗೆ ಮೃದುವಾಗಿ ಮಾತನಾಡುತ್ತಾ, ನೀವು ನಿಮ್ಮ ಸ್ನೇಹಿತರೊಂದಿಗೆ ತುಂಬಾ ಹಸಿವಾಗಿದೆ ಎಂದು ಮಾತನಾಡುತ್ತಿರುವುದನ್ನು ನಾನು ಕೇಳಿಸಿಕೊಂಡೆ. ನಿಮ್ಮ ಜಾಗದಲ್ಲಿ ನನ್ನ ಸಹೋದರಿಯಿದ್ದಿದ್ದರೂ ನನಗೆ ಬೇಸರವಾಗುತ್ತಿತ್ತು. ಕರೆಯಲ್ಲಿ ನೀವು ಸಸ್ಯಹಾರಿ ಎಂಬುದು ತಿಳಿದುಬಂದಿತ್ತು. ಹಾಗಾಗಿ ಈ ಸ್ಯಾಂಡ್​ವಿಚ್​ ನಿಮ್ಮ ಹಸಿವನ್ನು ನೀಗಿಸಬಹುದು ತೆಗೆದುಕೊಳ್ಳಿ ಎಂದು ನೀಡಿದ್ದಾರೆ.
ಅವನ ಚಿಂತನಶೀಲತೆಯಿಂದ ಪ್ರೇರಿತಳಾದ ಯೋಗಿತಾ, ಈ ಕ್ಷಣವನ್ನು ತಾನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ನನಗೆ ಅತ್ಯಂತ ಸಾಂತ್ವನದ ಅಗತ್ಯವಿದ್ದಾಗ ಬಂದ ಸರಳ ಕ್ರಿಯೆ ಇದಾಗಿದೆ ಎಂದು ಹೇಳಿದರು.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆದ ಕೆಲವೇ ಕ್ಷಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿಯಿತು. ಕೆಲವು ಬಕೆದಾರರು ಚಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ದಯೆ ನಿಜವಾಗಿಯೂ ಅತ್ಯಂತ ಅನಿರೀಕ್ಷಿತ ಸ್ಥಳಗಳಿಂದ ಬರುತ್ತದೆ. ಕೆಲವರು ನಿಮ್ಮ ಹೆಸರೇ ತಿಳಿಯದೆ ನಿಮ್ಮನ್ನು ಗುಣಪಡಿಸುತ್ತಾರೆ" ಎಂದು ಬರೆದಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net