ದ.ಸಂ.ಸ. ಬೆಂಗಳೂರು ಜಿಲ್ಲಾ ಸಂಯೋಜಕ ರಾಮಗೊಂಡನಹಳ್ಳಿ ರಮೇಶ್ ಮಾತನಾಡಿ ’ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಡಾ.ಶಿವರಾಮ ಕಾರಂತ್ ಬಡಾವಣೆ ಯೋಜನೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸುಮಾರು 7 ಸಾವಿರ ಸ್ವತ್ತುಗಳಿಗೆ ಸ್ವಾಧೀನ ಪತ್ರಗಳನ್ನು ನೀಡಿದ್ದು, ಈ ಸ್ವತ್ತುಗಳ ಪೈಕಿ 16 ಗ್ರಾಮಗಳ ಕಟ್ಟಡಗಳಿಗೆ ಸ್ಥಳೀಯ ಗ್ರಾಮ ಪಂಚಾಯತಿಗಳು ಮತ್ತು 1 ಗ್ರಾಮಕ್ಕೆ ಬಿಬಿಎಂಪಿ ಹತ್ತಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದವು, ಆದರೆ,ಈಗ ಬಿಡಿಎ ಏಕಾಏಕಿಯಾಗಿ ಅವೈಜ್ಞಾನಿಕವಾದ ದುಬಾರಿ ಪುರೋಭಿವೃದ್ಧಿ ತೆರಿಗೆಯನ್ನು ಈ 17 ಗ್ರಾಮಗಳಿಗೆ ವಿಧಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಪೂರೋಭಿವೃದ್ಧಿ ತೆರಿಗೆಯನ್ನು ರದ್ದುಗೊಳಿಸ ಬೇಕು ಎಂದು ಆಗ್ರಹಿಸಿದರು.