ಬಂಡಿಯಲ್ಲಿದ್ದ ತರಕಾರಿಗಳ ಮೇಲೆ ಹಾಯಾಗಿ ಪ್ರಯಾಣಿಸಿದ ನಾಯಿ; 'ಹೈಜಿನಿಕ್ ಎಲ್ರಪ್ಪ?' ಎಂದ ಬೆಂಗಳೂರಿಗರು..Benagaluru

ಎಕ್ಸ್​ನಿಂದ ಸಂಗ್ರಹಿಸಿದ ಚಿತ್ರ
ಎಕ್ಸ್​ನಿಂದ ಸಂಗ್ರಹಿಸಿದ ಚಿತ್ರ
Published on: 
  • ತರಕಾರಿ ಬಂಡಿ ಮೇಲೆ ಪ್ರಯಾಣಿಸಿದ ನಾಯಿ ಎಕ್ಸ್​ನಲ್ಲಿ ವಿಡಿಯೋ ವೈರಲ್

  • ಬೆಂಗಳೂರಿನಲ್ಲಿ ಸ್ವಚ್ಛತೆ ಎಲ್ಲಿದೆ ಎಂದು ಪ್ರಶ್ನಿಸಿದ ನೆಟ್ಟಿಗರು

  • ಕೆಲವರು ನಾಯಿಯ ಹಾಯಾದ ಪ್ರಯಾಣ ಕಂಡು ಕ್ಯೂಟ್​ ಎಂದಿದ್ದಾರೆ

ಬೆಂಗಳೂರು; ನಗರದಲ್ಲಿ ಆಹಾರದ ವಿಚಾರದಲ್ಲಿ ಯಾವುದೇ ಮಳಿಗೆ ಮತ್ತು ತರಕಾರಿ ಅಂಗಡಿಯಲ್ಲಿ ನೈರ್ಮಲ್ಯ ಇಲ್ಲ ಎನ್ನುವುದು ಹಲವರ ದೂರು. ಹೀಗಾಗಿ ಸಿಲಿಕಾನ್​ ಸಿಟಿ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಇತ್ತೀಚೆಗೆ ಆರೋಗ್ಯ ಇಲಾಖೆಯು ಹೋಟೆಲ್​​, ಫೈವ್​ ಸ್ಟಾರ್​ , ರೆಸ್ಟೋರೆಂಟ್​ಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಂಡಿತ್ತು. ಈ ಮಧ್ಯೆ ಯುವತಿಯೊಬ್ಬರು ಸಣ್ಣ ತರಕಾರಿ ಬಂಡಿ ಮೇಲೆ ನಾಯಿಯೊಂದು ಪ್ರಯಾಣಿಸಿದ ವಿಡಿಯೋವನ್ನು ಹಂಚಿಕೊಂಡು, ಸ್ವಚ್ಛತೆ ಎಲ್ಲಿದೆ ಇಲ್ಲಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕರಿಬೇವು, ಮೆಂತ್ಯ ಸೊಪ್ಪು ಸೇರಿದಂತೆ ಕವರ್​ನಲ್ಲಿಟ್ಟ ತರಕಾರಿಗಳ ಮೇಲೆ ನಾಯಿಯೊಂದು ಹಾಯಾಗಿ ಕುಳಿತು ಪ್ರಯಾಣಿಸುತ್ತಿರುವ ವಿಡಿಯೋ ಎಕ್ಸ್​ನಲ್ಲಿ ವೈರಲ್​ ಆಗಿದೆ. ಇದನ್ನು ಕಂಡ ಬೆಂಗಳೂರಿಗರು ಭಾರತದಂತಹ ದೇಶದಲ್ಲಿ ಮಾತ್ರ ಇಂತಹ ಪ್ರಕರಣಗಳು ಕಂಡುಬರುತ್ತದೆ. ಯಾರದ್ದೋ ಹೊಟ್ಟೆಗೆ ನಾಯಿಯಲ್ಲಿರುವ ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತಿದೆಯಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಕ್ಸ್​ ಪೋಸ್ಟ್​ನಲ್ಲಿ ಏನಿದೆ?

ಆಕಾಂಕ್ಷಾ ಎಂಬುವವರಿಂದ ಎಕ್ಸ್​ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನಾಯಿಯೊಂದು ಮಾರಾಟ ಮಾಡಲು ಕೊಂಡೊಯ್ಯುತ್ತಿರುವ ತರಕಾರಿ ಮೇಲೆ ಕುಳಿತಿದೆ. ಕರಿಬೇವು, ಕೊತ್ತಂಬರಿ ಸೇರಿದಂತೆ ಸಾಕಷ್ಟು ಹಸಿರು ತರಕಾರಿ ಇರುವ ಕವರ್​ಗಳ ಮೇಲೆ ನಾಯಿ ರಸ್ತೆಯ ಬೆರಗನ್ನು ನೋಡುತ್ತಾ ಕುಳಿತಿರುವುದು ವಿಡಿಯೋದಲ್ಲಿ ಇದೆ. ಇದಕ್ಕೆ ಆಕಾಂಕ್ಷಾ ಅವರು ಶೀರ್ಷಿಕೆ ಕೊಟ್ಟಿದ್ದು ಹೀಗೆ, 'ಸೋಮವಾರ ಅತ್ಯಂತ ಮುದ್ದಾದ ವಿಚಾರದೊಂದಿಗೆ ಶುರುವಾಯಿತು. ಬೆಂಗಳೂರಿನ ಮಹಾಕುಟ್ಟೇಶ್ವರನನ್ನು ಭೇಟಿ ಮಾಡಿ' ಎಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ನೆಟ್ಟಿಗರಿಂದ ತರಹೇವಾರಿ ಕಾಮೆಂಟ್

ಈ ಪೋಸ್ಟ್​ಗೆ ಹಲವರು ಕಾಮೆಂಟ್​ ಮಾಡಿ ಹೈಜಿನ್​ ಬಗ್ಗೆ ದನಿ ಎತ್ತಿದ್ದಾರೆ. ಇನ್ನೂ ಕೆಲವರು ನಾಯಿ ಕುಳಿತು ಬೆರಗಾಗಿರುವ ಭಂಗಿ ಬಗ್ಗೆ ಕ್ಯೂಟ್​ ಎಂದು ವರ್ಣನೆ ಮಾಡಿದ್ದಾರೆ. ಇನ್ನೂ ಕೆಲವರು ನಾಯಿಯು ತರಕಾರಿ ಕಳ್ಳತನವಾಗುವುದನ್ನು ತಡೆಯುವ ಕೆಲಸ ಮಾಡುತ್ತಿದೆ. ಅದರ ಪೊಲೀಸ್​ ವೃತ್ತಿಯನ್ನು ನೀವು ಪ್ರಶ್ನೆ ಮಾಡಬೇಡಿ ಎಂದು ತಮಾಷೆ ಮಾಡಿದ್ದಾರೆ.

ಆದರ್ಶ್​ ಎಂಬ ಎಕ್ಸ್​ ಬಳಕೆದಾರರು ಪೋಸ್ಟ್​ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಎಲ್ಲ ಕ್ಯೂಟ್​ ಎಂದು ಯಾಕಾಗಿ ಹೇಳ್ತಿದ್ದೀರಿ. ನಾಯಿ ನಾವು ಅಥವಾ ಇನ್ಯಾರೋ ತಿನ್ನುವ ತರಕಾರಿಗಳ ಮೇಲೆ ಕುಳಿತಿದೆ. ಅದರಲ್ಲೂ ಕರಿಬೇವಿನ ಮೇಲೆ ಕುಳಿತಿದೆ. ಕೆಲವರು ಇದನ್ನು ತೊಳೆಯದೆ ಬಳಕೆ ಮಾಡುತ್ತಾರೆ. ಪಾಪಾ ಅವರ ಕತೆ ಏನಾಗಬೇಡ. ಇಲ್ಲಿ ಸ್ವಚ್ಛತೆ ಎಲ್ಲಿದೆ ಅನ್ನೋದನ್ನ ಯೋಚಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಕ್ಯೂಟ್​ ದೃಶ್ಯಗಳು ಭಾರತದಲ್ಲಿ ಮತ್ತು ಭಾರತೀಯರ ಮೊಬೈಲ್​ ಕ್ಯಾಮೇರಾದಲ್ಲಿ ಮಾತ್ರ ಸಿಗುತ್ತದೆ ಎಂದು ಒಬ್ಬ ಎಕ್ಸ್​ ಬಳಕೆದಾರ ಲೇವಡಿ ಮಾಡಿದ್ದಾರೆ, ಮತ್ತೊಬ್ಬರು ಹಾ ಈಗ ನನಗೆ ತಿಳಿಯುತ್ತಿದೆ. ತರಕಾರಿಗಳು ಯಾಕಾಗಿ ಅಷ್ಟು ರುಚಿಯಾಗಿರುತ್ತದೆ ಎಂದು ಕೀಟಲೆ ಮಾಡಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net