ನೇರ ವೇತನ ಪಾವತಿ ಪದ್ಧತಿಯಡಿ ನೇಮಕಕ್ಕೆ ಪಟ್ಟು

ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ನೇರ ವೇತನ ಪಾವತಿ ಪದ್ಧತಿಯಡಿ ನೇಮಕ ಮಾಡಿಕೊಳ್ಳಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಬಿಡಬ್ಲುಎಸ್​ಎಸ್​ಬಿ ಗುತ್ತಿಗೆ ಕಾರ್ಮಿಕರ ಸಂಘದ ಸದಸ್ಯರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
BWSSB Contract_Workers Protest
ಬಿಡಬ್ಲುಎಸ್​ಎಸ್​ಬಿ ಗುತ್ತಿಗೆ ಕಾರ್ಮಿಕರ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. folder
Published on

ಬೆಂಗಳೂರು: ಜಲಮಂಡಳಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ನೇರ ವೇತನ ಪಾವತಿ ಪದ್ಧತಿಯಡಿ ನೇಮಕ ಮಾಡಿಕೊಳ್ಳಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲುಎಸ್​ಎಸ್​ಬಿ) ಗುತ್ತಿಗೆ ಕಾರ್ಮಿಕರ ಸಂಘದ ಸದಸ್ಯರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಸಂದ ಮಾಜಿ ಅಧ್ಯಕ್ಷ ಗಿರಿಗೌಡ ಮಾತನಾಡಿ, ಕಾರ್ಮಿಕರ ಕಾಯ್ದೆಯಡಿ ದೊರೆಯಬೇಕಾದ ಸೌಲಭ್ಯಗಳು ಸಮರ್ಪಕವಾಗಿ ಲಭಿಸುತ್ತಿಲ್ಲ. ಪಾವತಿ ಮಾಡುತ್ತಿರುವ ಸಂಬಳಕ್ಕಿಂತ ಹೆಚ್ಚುವರಿಯಾಗಿ ದುಡಿಸಿಕೊಳ್ಳುತ್ತಿದ್ದರೂ ಜೀವನಕ್ಕೆ ಯಾವುದೇ ಗ್ಯಾರಂಟಿ ನೀಡಿಲ್ಲ ಎಂದು ದೂರಿದರು.

ಬೋನಸ್​, ಡಿಎ, ಅರಿಯರ್ಸ್​ ಅನ್ನು ಕೂಡಲೇ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು 1ರಿಂದ 7ನೇ ದಿನಾಂಕದೊಳಗೆ ವೇತನ ಪಾವತಿ ಮಾಡಬೇಕು. ರಜೆ ಅವಧಿ ಮುಗಿದ ನಂತರ ಪುನ@ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಮೂರು ತಿಂಗಳಿಗೊಮ್ಮೆ ಬರುವ ಅಪಾಯ ಭತ್ಯೆಯನ್ನು ವೇತನದ ಜತೆಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.

ಮಹಿಳಾ ಕಾರ್ಮಿಕರ ಮೇಲಿನ ಮಾನಸಿಕ ಕಿರುಕುಳ ನಿಲ್ಲಸಬೇಕು. ಕಾರ್ಮಿಕರಿಗೆ ಇಎಸ್​ಐ ಕಾರ್ಡ್​ ನೀಡಬೇಕು. ಕೆಲಸದ ಸಂದರ್ಭದಲ್ಲಿ ಕಾರ್ಮಿಕರ ಸಾವುಗಳಿಗೆ ಜವಾಬ್ದಾರಿ ನಿಗದಿಪಡಿಸಿ ಪ್ರತಿಯೊಂದು ಸಾವು ಮತ್ತು ಗಂಭೀರ ಅವಘಾತ ಕರಿತು ಸಮರ್ಪಕ ತನಿಖೆ ನಡೆಸಿ ಪರಿಹಾರ ನೀಡಬೇಕು. 6 ತಿಂಗಳಿಗೊಮ್ಮೆ ಕಾರ್ಮಿಕರ ಕುಂದು&ಕೊರತೆಗಳ ಸಭೆಯನ್ನು ಸಂದ ಜಂಟಿ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಜನ ಜಾಗೃತಿ ವೇದಿಕೆಯ ನೂರು ಶ್ರೀಧರ್​, ಎದ್ದೇಳು ಕರ್ನಾಟಕ ಮುಖ್ಯಸ್ಥ ನಾಗೇಶ್​, ಕೆ.ವಿ. ಭಟ್​, ಸಂದ ಪದಾಧಿಕಾರಿಗಳಾದ ಕೃಷ್ಣಗೌಡ, ಹರೀಶ್​, ಸುರೇಶ್​, ಸಂತೋಷ್​, ಆದಿನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net