ರೆವಿನ್ಯೂ ಸೈಟ್ ದಾರರಿಗೆ ಪರಿಹಾರ ನೀಡಿ: ಬಿಡಿಎಗೆ ಕಾರಂತ ಲೇಔಟ್​ ಸಂತ್ರಸ್ತರ ಮನವಿ

ಅರೆ ಅಭಿವೃದ್ಧಿ ಹೊಂದಿರುವ ಬಡಾವಣೆಗಳಲ್ಲಿರುವ ನಿವೇಶನ ಮಾಲೀಕರಿಗೇ ಹೊಸದಾಗಿ ಹಂಚಿಕೆ ಮಾಡಬೇಕು ಹಾಗೂ ಹಂಚಿಕೆ ಪ್ರಕ್ರಿಯೆನ್ನು ತಕ್ಷಣವೇ ಆರಂಭಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ಶಿವರಾಮ ಕಾರಂತ ಬಡಾವಣೆಯ ರೆವಿನ್ಯೂ ಸೈಟ್​​ ಸಂತ್ರಸ್ತರು ಬಿಡಿಎ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಶಿವರಾಮ ಕಾರಂತ ಬಡಾವಣೆಯ ರೆವಿನ್ಯೂ ಸೈಟ್​​ ಸಂತ್ರಸ್ತರು ಬಿಡಿಎ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
Published on: 

ಬೆಂಗಳೂರು: ಬಿಡಿಎ ನಿರ್ಮಿಸಿರುವ ಶಿವರಾಮ ಕಾರಂತ ಬಡಾವಣೆಗೆ ಸ್ವಾಧೀನವಾಗಿರುವ ರೆವಿನ್ಯೂ ಸೈಟ್‌ಗಳ ಸಂತ್ರಸ್ತರಿಗೆ ಪರಿಹಾರದ ನಿವೇಶನಗಳನ್ನು ಬೇಗನೆ ವಿತರಿಸುವಂತೆ ಸ್ಥಳೀಯ ಮುಖಂಡರು ಆಗ್ರಹಿಸಿದ್ದಾರೆ.

ಈ ಸಂಬಂಧ ಸಂತ್ರಸ್ತರು ಮುಖ್ಯಮಂತ್ರಿ, ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಬರೆದಿರುವ ಮನವಿ ಪತ್ರವನ್ನು ಸೋಮವಾರ ಪ್ರಾಧಿಕಾರಕ್ಕೆ ಸಲ್ಲಿಸಿದ ವೇಳೆ ಈ ಒತ್ತಾಯವನ್ನು ಮಾಡಲಾಗಿದೆ.

ಈ ವೇಳೆ ಮಾತನಾಡಿದ ಸಂತ್ರಸ್ತರ ಪರ ಹೋರಾಟಗಾರ ರಾಮಗೊಂಡನಹಳ್ಳಿ ಎಂ. ರಮೇಶ್, ಸಂತ್ರಸ್ತರ ರೆವಿನ್ಯೂ ಸೈಟ್‌ಗಳನ್ನು ಬಿಡಿಎ ವಶಕ್ಕೆ ಪಡೆದು ಒಂಬತ್ತು ವರ್ಷಗಳಾಗಿವೆ. ಈ ಅವಧಿಯಲ್ಲಿ ಸುಪ್ರೀಂಕೊರ್ಟ್ ಆದೇಶದಂತೆ ಜಸ್ಟೀಸ್ ಭೂಪಯ್ಯ ಕಮಿಟಿ ರಚಿಸಿ ಸಂತ್ರಸ್ತರು ಪರಿಹಾರದ ಸೈಟ್‌ಗಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಬದಲಿ ಸೈಟ್ ನೀಡುವ ಭರವಸೆ ನೀಡಿದ್ದರೂ, ಈವರೆಗೂ ಹಂಚಿಕೆ ಮಾಡದಿರುವುದು ಬಡವರು ಬೀದಿಗೆ ಬೀಳುವಂತಾಗಿದೆ ಎಂದರು.

ದುಬಾರಿ ಮೊತ್ತೆ ಬದಲು ರಿಯಾಯಿತಿ ದರ ನಿಗದಿ ಮಾಡಿ:

ವಶಪಡಿಸಿಕೊಂಡಿರುವ ರೆವಿನ್ಯೂ ಸೈಟ್‌ಗೆ ಬದಲಿ ನಿವೇಶನ ನೀಡುವ ಭರವಸೆ ಸಿಕ್ಕಿದೆ. ಆದರೆ, ಹಂಚಿಕೆಯಾಗುವ ಸೈಟ್‌ಗಳಿಗೆ ಅಭಿವೃದ್ಧಿ ಶುಲ್ಕ ಅನ್ವಯಿಸಲಾಗಿದೆ. ಇದು ದುಬಾರಿ ಮೊತ್ತ ಆಗಿರುವುದರಿಂದ ರೈತರಿಗೆ ರಿಯಾಯಿತಿ ದರ ನಿಗದಿ ಮಾಡಿರುವಂತೆ ರೆವಿನ್ಯೂ ಸೈಟ್ ಸಂತ್ರಸ್ತರಿಗೂ ಅನ್ವಯಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಅವರು ವಿನಂತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net