ಕೆ-ರೈಡ್‌ನಿಂದ ನಾಗರಿಕ-ಪಾಲುದಾರರ ಸಂಪರ್ಕ ಕಾರ್ಯಕ್ರಮ

k-rideprograme
k-rideprograme
Published on

ಪ್ರಮುಖ ಮುಖ್ಯಾಂಶಗಳು

  • ನಾಗರಿಕ ಕೇಂದ್ರಿತ ಮೂಲಸೌಕರ್ಯ ಅಭಿವೃದ್ಧಿಗೆ ಭರವಸೆ
  • ಕೆ-ರೈಡ್ವ್ಯ​​ ವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಹೇಳಿಕೆ
ಬೆಂಗಳೂರು: ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಯು (ಕೆ-ರೈಡ್) ಪಾರದರ್ಶಕತೆ, ಭಾಗವಹಿಸುವಿಕೆ ಹಾಗೂ ನಾಗರಿಕ ಕೇಂದ್ರಿತ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಬದ್ಧತೆಯನ್ನು ಹೊಂದಿಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಅವರು ತಿಳಿಸಿದರು.
ಬುಧವಾರ ಕೆ-ರೈಡ್ ಆಯೋಜಿಸಿದ್ದ ನಾಗರಿಕ-ಪಾಲುದಾರರ ಸಂಪರ್ಕ ಕಾರ್ಯಕ್ರಮದಲ್ಲಿ (ಔಟ್‌ರೀಚ್ ಪ್ರೋಗ್ರಾಂ) ಮಾತನಾಡಿದ ಅವರು, ಸಂಸ್ಥೆಯು ಕೇವಲ ರೈಲು ಮೂಲಸೌಕರ್ಯ ನಿರ್ಮಿಸಲಷ್ಟೇ ಸೀಮಿತವಾಗಿಲ್ಲ. ನಾಗರಿಕ ಸೌಲಭ್ಯ ಅನುಷ್ಠಾನದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ನಾಗರಿಕರೊಂದಿಗೆ ನಿರಂತಹ ಸಂವಹನದೊಂದಿಗೆ ಸಾರ್ವಜನಿಕರ ವಿಶ್ವಾಸವನ್ನು ಮೂಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಉಪನಗರ ರೈಲು ಯೋಜನೆಯನ್ನು ಜನಕೇಂದ್ರಿತ ಚಲನವಲನ ಪರಿಹಾರವಾಗಿ ರೂಪಿಸಲಾಗುತ್ತಿದೆ ಎಂದರು.
ಸಂಸ್ಥೆಯ ನಿರ್ದೇಶಕ (ಯೋಜನೆ) ರಾಜೇಶ್‌ಕುಮಾರ್ ಸಿಂಗ್ ಮಾತನಾಡಿ, ಸಾರ್ವಜನಿಕರು ಹಾಗೂ ಪಾಲುದಾರರೊಂದಿಗೆ ನಿರಂತರವಾಗಿ ಸಂವಾದದಿಂದ ಯೋಜನೆಗಳನ್ನು ನಿಖರವಾಗಿ ರೂಪಿಸಿ ಇನ್ನಷ್ಟು ವಿಸ್ತೃತವಾಗಿ ಅನುಷ್ಠಾನಕ್ಕೆ ತರಲು ಸಹಾಯಕವಾಗುತ್ತದೆ. ರಚನಾತ್ಮಕ ಸಲಹೆಗಳು ಲಭ್ಯವಾಗುವುದರಿಂದ ಸಮಸ್ಯೆಗಳನ್ನು ಮುಂಚಿತವಾಗಿ ತಿಳಿದು ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುತ್ತದೆ. ಈ ಅಂಶಗಳನ್ನು ನಮ್ಮ ಪ್ರಾಜೆಕ್ಟ್‌ಗಳಲ್ಲಿ ಅವಳಡಿಸಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ ಕೆ-ರೈಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸಂಪರ್ಕ ಸುದ್ದಿಪತ್ರ ‘ಸಂಪರ್ಕ’ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net