

ಬೆಂಗಳೂರು: ನಗರದಲ್ಲಿ ದೀಪಾವಳಿ ಹಬ್ಬಕ್ಕೆ ಮೊದಲೇ ಪಟಾಕಿ ಅವಘಡಗಳು ಸಂಭವಿಸಿದ್ದು, ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿ ಗಾಯ ಪ್ರಕರಣ ವರದಿಯಾಗಿದೆ.
ಯಾರೋ ಹುಡುಗರು ಬಿಜಿಲಿ ಪಟಾಕಿ ಸಿಡಿಸುತ್ತಿರುವಾಗ ನೋಡುತ್ತ ನಿಂತಿದ್ದ ಆರು ವರ್ಷದ ಬಾಲಕನ ಬಲ ಕಣ್ಣಿಗೆ ಪಟಾಕಿ ಕಿಡಿ ಸಿಡಿದು ಗಾಯಗೊಂಡಿದ್ದಾನೆ.
ಬಾಲಕನ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಒದಗಿಸಲಾಗುತ್ತಿದೆ. ಎಡ ಕಣ್ಣು ಸಹಜ ಸ್ಥಿತಿಯಲ್ಲಿದೆ. ಪಟಾಕಿ ಸಿಡಿಸುವಾಗ ಮಕ್ಕಳು ದೂರವಿರುವಂತೆ ನೋಡಿಕೊಳ್ಳಬೇಕು ಎಂದು ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.