ಕೇಂದ್ರ ನಗರ ಪಾಲಿಕೆಯಿಂದ 20 ಮೇಲ್ಸೇತುವೆ, 8 ಅಂಡರ್‌ಪಾಸ್ ಸ್ವಚ್ಛತೆ

cleaning of flyovers
cleaning of flyovers
Published on

ಪ್ರಮುಖ ಮುಖ್ಯಾಂಶಗಳು

  • ನಾಲ್ಕು ಟನ್ ತ್ಯಾಜ್ಯ ತೆರವುಗೊಳಿಸಿದ ಪೌರಕಾರ್ಮಿಕರು
  • ಸ್ವಚ್ಛ ಸರ್ವೇಕ್ಷಣ್ ಅಭಿಯಾನದಡಿ ವಿಶೇಷ ಸ್ವಚ್ಛತಾ ಕಾರ್ಯ
ಬೆಂಗಳೂರು: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ತ್ಯಾಜ್ಯಮುಕ್ತ ಪಾಲಿಕೆಯನ್ನಾಗಿಸಲು ವಿಶೇಷ ಸ್ವಚ್ಛತಾ ಅಭಿಯಾನದ ವೇಳೆ 20 ಮೇಲ್ಸೇತುವೆ ಹಾಗೂ 8 ಅಂಡರ್‌ಪಾಸ್ ಸ್ಥಳಗಳನ್ನು ಶುಚಿಗೊಳಿಸಲಾಗಿದೆ ಎಂದು ಕೇಂದ್ರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಮೇಲ್ಸೇತುವೆಗಳು ಹೆಚ್ಚಾಗಿ ಶಾಲಾ-ಕಾಲೇಜುಗಳ ಹತ್ತಿರ, ಜಂಕ್ಷನ್‌ಗಳು ಹಾಗೂ ಜನದಟ್ಟಣೆ ಸ್ಥಳಗಳಲ್ಲಿದ್ದು, ಪ್ರತಿನಿತ್ಯ ಅವುಗಳನ್ನು ಸ್ವಚ್ಛವಾಗಿರಿಸುವುದು ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಶುಚಿ ಕಾಪಾಡುವ ಉದ್ದೇಶದಿಂದ ನಗರ ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನದ 5ನೇ ಭಾಗವಾಗಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ.
495 ಸಿಬ್ಬಂದಿಗಳು ಭಾಗಿ:
ಸ್ವಚ್ಛತಾ ಕಾರ್ಯದಲ್ಲಿ 334 ಪೌರ ಕಾರ್ಮಿಕರು, 161 ಆಟೋ ಟಿಪ್ಪರ್ ಚಾಲಕರು, ಸ್ವಚ್ಛತಾ ಸಿಬ್ಬಂದಿ ಭಾಗಿಯಾಗಿದ್ದರು. ಈ ವೇಳೆ ಅಂದಾಜು ನಾಲ್ಕು ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್ ಮೇಲುಸ್ತುವಾರಿಯಲ್ಲಿ ನಡೆದ ಈ ಸ್ವಚ್ಛತಾ ಅಭಿಯಾನದಲ್ಲಿ ಡಿಜಿಎಂ ಭೀಮೇಶ್ ನಾಯಕ್ ಹಾಗೂ ಆಯಾ ವಿಭಾಗಗಳ ಎಜಿಎಂಗಳು ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net