ದಕ್ಷಿಣ ನಗರ ಪಾಲಿಕೆಯಿಂದ ಸಿ.ಎ. ನಿವೇಶನ ವಶ

casitetakenover
casitetakenover
Published on

ಪ್ರಮುಖ ಮುಖ್ಯಾಂಶಗಳು

  • 10 ಕೋಟಿ ರೂ. ಮೌಲ್ಯದ ಜಾಗದಲ್ಲಿ ಕ್ರೀಡೆಗೆ ಅವಕಾಶ
  • ಆಯುಕ್ತ ಕೆ.ಎನ್. ರಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ
ಬೆಂಗಳೂರು: ದಕ್ಷಿಣ ಪಾಲಿಕೆಯ ಬೊಮ್ಮನಹಳ್ಳಿ ವಲಯದ ಅರಕೆರೆಯ ವ್ಯಾಪ್ತಿಯಲ್ಲಿ ನಿರ್ಮಿತವಾಗಿರುವ ಶಾಂತಿನಿಕೇತನ ಬಡಾವಣೆಯಲ್ಲಿ ನಾಗರಿಕರ ಸೌಲಭ್ಯಕ್ಕಾಗಿ (ಸಿ.ಎ) ಮೀಸಲಿಟ್ಟಿದ್ದ ಬೃಹತ್ ವಿಸ್ತೀರ್ಣದ ನಿವೇಶನವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಇತ್ತೀಚಿಗೆ ಶಾಂತಿನಿಕೇತನ ಬಡಾವಣೆ ಸಹಿತ ಇತರ ಸಿ.ಎ. ಸೈಟ್‌ಗಳ ಬಗ್ಗೆ ಹೈಕೋರ್ಟ್, ಪಾಲಿಕೆಯ ಸುಪರ್ದಿಗೆ ವಹಿಸುವಂತೆ ಆದೇಶ ಹೊರಡಿಸಿತ್ತು. ಇದನ್ನಾಧರಿಸಿ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಹಿನ್ನೆಲೆಯಲ್ಲಿ ಪಾಲಿಕೆಯ ಆಯುಕ್ತ ಕೆ.ಎನ್. ರಮೇಶ್ ನೇತೃತ್ವದಲ್ಲಿ ಶನಿವಾರ ಸಿ.ಎ. ಜಾಗದಲ್ಲಿ ನಿರ್ಮಿಸುತ್ತಿದ್ದ ಕಟ್ಟಡವನ್ನು ತೆರವುಗೊಳಿಸುವ ಜತೆಗೆ ಖಾಲಿ ಉಳಿದಿರುವ ಜಾಗವನ್ನು ಸುಪರ್ದಿಗೆ ತೆಗೆದುಕೊಳ್ಳಲಾಗಿದೆ.
10 ಕೋಟಿ ಮೌಲ್ಯದ ಸಿ.ಎ ಜಾಗ:
ಅಂದಾಜು 20,000 ಚದರ ಅಡಿ ವಿಸ್ತೀರ್ಣದ ಸಿ.ಎ. ನಿವೇಶನದ ಮೌಲ್ಯ 10 ಕೋಟಿ ರೂ. ಆಗಿದೆ. ಇನ್ನು ಮುಂದೆ ಸಿ.ಎ. ನಿವೇಶನಗಳ ಒತ್ತುವರಿ ಹಾಗೂ ದುರುಪಯೋಗ ತಡೆಗೆ ಜಿಬಿಎ ಸ್ವತ್ತು ಎಂಬ ನಾಮಫಲಕವನ್ನು ಅಳವಡಿಸಲಾಗಿದೆ. ಈ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಸತೀಶ್ ಬಾಬು, ಮುಖ್ಯ ಅಭಿಯಂತರ ಕೆ.ವಿ. ರವಿ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net