ಬರ್ನೌಟ್ ಆಗಿದ್ದೇನೆ, ಹೆಂಡ್ತಿಗೆ ಸಮಯ ಕೊಡಲಾಗ್ತಿಲ್ಲ; ಬೆಂಗಳೂರಿನ ಕೆಲಸದೊತ್ತಡದ ಅಸಲಿ ಸತ್ಯ ಬಿಚ್ಚಿಟ್ಟ ಟೆಕ್ಕಿ

ಬರ್ನೌಟ್ ಆಗಿದ್ದೇನೆ, ಹೆಂಡ್ತಿಗೆ ಸಮಯ ಕೊಡಲಾಗ್ತಿಲ್ಲ; ಬೆಂಗಳೂರಿನ ಕೆಲಸದೊತ್ತಡದ ಅಸಲಿ ಸತ್ಯ ಬಿಚ್ಚಿಟ್ಟ ಟೆಕ್ಕಿ
Published on
  • ಬೆಂಗಳೂರಿನ ಕೆಲಸದೊತ್ತಡ, ಟ್ರಾಫಿಕ್​ ಜೀವನದ ಬಗ್ಗೆ ಟೆಕ್ಕಿ ಪೋಸ್ಟ್​

  • ರೆಡ್ಡಿಟ್​ನಲ್ಲಿ ಟೆಕ್ಕಿ ಪೋಸ್ಟ್​​, ಕೆಲಸ ಬಿಡ್ಬೇಡಿ ಎಂದು ಸಲಹೆ ಕೊಟ್ಟ ನೆಟ್ಟಿಗರು.

  • ಕಾರ್ಪೋರೇಟ್​ ಜಗತ್ತಿನ ದುಡಿಮೆ ಬಗ್ಗೆ ಟೆಕ್ಕಿ ಮಾತು.

ಕೆಲಸದೊತ್ತಡ, ಟ್ರಾಫಿಕ್​ನಲ್ಲಿ ಕಳೆಯುವ ಜೀವನ ಬಿಟ್ಟು ಒಮ್ಮೊಮ್ಮೆ ಊರಿಗೆ ಹೋಗಿ ವ್ಯವಸಾಯ ಮಾಡಿ ಬಿಡೋಣ ಎನಿಸುತ್ತೆ ಎನ್ನುವ ಮಾತು ಪ್ರತಿ ಐಟಿ-ಬಿಟಿ ಕಂಪನಿ ಸೇರಿದಂತೆ 6-8 ಗಂಟೆ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿಗಳು ಗೋಳು. ಸಂಬಂಧಿಕರಿಗೆ, ಪೋಷಕರಿಗೆ ಯಾರಿಗೂ ಸಮಯ ನೀಡಲಾಗುತ್ತಿಲ್ಲ ಎಂದು ಗೋಗರೆಯುತ್ತಲೇ ಕಚೇರಿ ಕೆಲಸಕ್ಕೆ ಒಗ್ಗಿಕೊಂಡಿದ್ದೇವೆ ಆದರೆ, ಇಲ್ಲೊಬ್ಬ ಯುವಕ ತನ್ನ ಕೆಲಸಕ್ಕೆ ಬ್ರೇಕ್​ ಕೊಟ್ಟುಕೊಳ್ಳುವ ಬಗ್ಗೆ ರೆಡ್ಡಿಟ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಜೀವನ ಮತ್ತು ಕಾರ್ಪೋರೇಟ್ ಜಗತ್ತಿನ ಒತ್ತಡದ ಬದುಕು ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆಯೊಂದು ರೆಡ್ಡಿಟ್​ ಬಳಕೆದಾರರನ್ನು ಆಕ್ಟೀವ್​ ಮಾಡಿದೆ. 28 ವರ್ಷದ ಉದ್ಯೋಗಿ ಹಂಚಿಕೊಂಡಿರುವ ಸಮಸ್ಯೆ ಬಗ್ಗೆ ಹಲವರು ಸಲಹೆ ನೀಡುತ್ತಿದ್ದರೆ, ಇನ್ನೂ ಕೆಲವರು ತಮ್ಮ ಸಂಕಷ್ಟವನ್ನು ಹಂಚಿಕೊಳ್ಳುತ್ತಿದ್ದಾರೆ.

ಪೋಸ್ಟ್​ನಲ್ಲಿ ಹೀಗೆ ಬರೆದುಕೊಂಡಿದ್ದಾರೆ

ಆರು ವರ್ಷ ಅನುಭವ ಹೊಂದಿರುವ 28 ವರ್ಷದ ಪ್ರಾಡಕ್ಟ್​ ಮ್ಯಾನೇಜರ್​​​​​​​ ಐಟಿ ಕೆಲಸವೂ ತೀರ ಬರ್ನೌಟ್​​​​​​​​ ಎನಿಸುವಂತಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. 35 ಲಕ್ಷ ವಾರ್ಷಿಕ ವೇತನದ ಕೆಲಸಕ್ಕೆ ಪತ್ನಿ, ಸಂಬಂಧಿಕರು, ತಂದೆ-ತಾಯಿಗಾಗಿ ವಿದಾಯ ಹೇಳುವ ಚಿಂತೆಯಲ್ಲಿದ್ದೇನೆ. 3-6 ತಿಂಗಳು ಕೆಲಸಕ್ಕೆ ಬ್ರೇಕ್​ ಬೇಕು ಎನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿರುವ ಟೆಕ್ಕಿಗೆ, ಆರ್ಥಿಕ ಪರಿಸ್ಥಿತಿ ಬದ್ಧವಾಗಿದೆಯಂತೆ. ಇನ್ನೂ ಇನ್ನು ಮನೆಯ ಮಾಸಿಕ ಖರ್ಚು 1.25 ಲಕ್ಷದಿಂದ 1.5ಲಕ್ಷದವರೆಗೂ ಆಗುರತ್ತದೆ ಎಂದಿದ್ದಾರೆ. 50 ಲಕ್ಷ ಸೇವಿಂಗ್ಸ್ ಇದೆ. ಪತ್ನಿ ಸಹ ಕೆಲಸಕ್ಕೆ ಹೋಗುತ್ತಿದ್ದಾಳೆ. ಆದರೂ ಈಗ ಕೆಲಸ ಬಿಟ್ಟರೆ ಮತ್ತೆ ಕೆಲಸ ಹುಡುಕುವುದು ಕಷ್ಟ ಇದೆ. ಪ್ರಾಡಕ್ಟ್​ ಮ್ಯಾನೇಜರ್​ ಹುದ್ದೆಗೆ ಸಾಕಷ್ಟು ತ್ರಾಸದಾಯಕ ಎಂದು ಬರೆದುಕೊಂಡಿದ್ದಾರೆ.

ಪರ-ವಿರೋಧ ಚರ್ಚೆ

28 ವರ್ಷದ ಯುವಕನ ಮಾತಿಗೆ ರೆಡ್ಡಿಟ್​ನಲ್ಲಿ ಪರ ವಿರೋಧ ಚರ್ಚೆಯಾಗುತ್ತಿದೆ. ಕೆಲವರು ಆರೋಗ್ಯ ಮತ್ತು ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡಿ ವಿರಾಮ ತೆಗೆದುಕೊಳ್ಳುವಂತೆ ಸಲಹೆ ನೀಡಿದರೆ, ಇನ್ನುಕೆಲವರು ಪ್ರಸ್ತುತ  PM ಟೆಕ್ ಮಾರುಕಟ್ಟೆಯಲ್ಲಿ ಉದ್ಯೋಗ ಸಿಗುವುದು ಕಷ್ಟಕರವಾಗಿರುವುದರಿಂದ ಕೆಲಸ ಬಿಡುವ ನಿರ್ಧಾರ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದ್ದಾರೆ.

WEB

ಎಚ್ಚರವಿರಲಿ

ನಿಮ್ಮ ಕೌಶಲ್ಯದ ಮೇಲೆ ನಂಬಿಕೆ ಇಡಿ. ನಿಮ್ಮ ಮನಸ್ಸು ಏನನ್ನು ಹೇಳುತ್ತದೆಯೋ ಅದನ್ನು ಮಾಡಿ. ನಿಮ್ಮ ಕುಟುಂಬ ಸದಸ್ಯರ ಜೊತೆ ಮಾತನಾಡಿ ನಂತರ ನಿರ್ಧಾರಕ್ಕೆ ಬನ್ನಿ. 2-3 ವಾರ ರಜೆ ತೆಗೆದುಕೊಳ್ಳಿ ಎಂದು ಒಬ್ಬರು ಸಲಹೆ ನೀಡಿದ್ದಾರೆ.

14 ತಿಂಗಳಿನಿಂದ ಕೆಲಸಕ್ಕಾಗಿ ಹುಡುಕಾಡುತ್ತಿದ್ದೇನೆ. ಕಷ್ಟಪಡುತ್ತಿದ್ದೇನೆ. ನಾನು ಉಳಿತಾಯ ಮಾಡಿರುವ ಬಹುತೇಕ ಹಣ ಈಗ ಖರ್ಚಾಗಿದೆ. ಕೆಲಸ ಬಿಡುವ ಮುನ್ನ ಯೋಚನೆ ಮಾಡಿ ನಿಮ್ಗೆ ಒಳ್ಳೆಯದಾಗಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net