

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ನಗರದಲ್ಲಿ ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ಓಡಾಡುವ ವಾಹನ ಸವಾರರ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ. ಸಿಗ್ನಲ್ ದಾಟುವುದು, ಫುಟ್‌ಪಾತ್ ಮೇಲೆ ಸಂಚರಿಸುವುದು, ಹೆಲ್ಮೆಟ್ ಧರಿಸದೇ ಇರವುದು ವಾಡಿಕೆಯಾಗಿದೆ. ಆದರೆ ಇಲ್ಲೊಬ್ಬ ಟೆಕ್ಕಿ, ಒನ್ ವೇನಲ್ಲಿ ಬಂದ ಆಟೋ ಚಾಲಕನ ತಪ್ಪನ್ನು ಪ್ರೂವ್ ಮಾಡಿ, ಸಾರಿ ಕೇಳುವಂತೆ ಮಾಡಿದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮುಂದುವರೆದು, ಆಟೋ ಚಾಲಕ ಇಡೀ ರಸ್ತೆಯನ್ನು ಆಕ್ರಮಿಸಿಕೊಂಡು, ತಪ್ಪಿಲ್ಲದವರಂತೆ ಮಾತನಾಡಿದ ಧೈರ್ಯ ಮತ್ತು ಆತ್ಮವಿಶ್ವಾಸವಿದೆಯಲ್ಲ. ಯಬ್ಬಾ. ಇದು ಒನ್ ವೇ ಅಲ್ಲ ಎಂದು ವಾದ ಮಾಡಿದ. ಇದು ಒನ್ವೇ ಫಲಕವೂ ಇದೆ. ಅಕಸ್ಮಾತ್ ಬೋರ್ಡ್ ಇಲ್ಲದಿದ್ದರೆ 1,000 ರೂಪಾಯಿ ಕೊಡಲು ಸಿದ್ಧ. ಆದರೆ ಬೋರ್ಡ್ ಇದ್ದರೆ ಆತ ಕ್ಷಮೆಯಾಚಿಸಬೇಕು ಎಂದೆ. ಮುಂದೆ ಹೋಗಿ ಆತನಿಗೆ ಒನ್ ವೇ ಬೋರ್ಡ್ ತೋರಿಸಿದೆ.