ಬಿಡಿಎ ಕಾರ್ಯಾಚರಣೆ; 25 ಕೋಟಿ ಮೌಲ್ಯದ ಆಸ್ತಿ ವಶ

bda-operation
bda-operation
Published on

ಪ್ರಮುಖ ಮುಖ್ಯಾಂಶಗಳು

  • ರಾಜಾಜಿನಗರ ಬಡಾವಣೆಯ ಇಂಡಸ್ಟ್ರೀಯಲ್ ಸಬರ್ಬ್​​​

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಮಂಗಳವಾರ ರಾಜಾಜಿನಗರ ಬಡಾವಣೆ 2ನೇ ಹಂತದ ಇಂಡಸ್ಟ್ರೀಯಲ್ ಸಬರ್ಬ್‌ನಲ್ಲಿ 25 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಯಶವಂತಪುರ ಹೋಬಳಿಯ ಪೀಣ್ಯ ಗ್ರಾಮಕ್ಕೆ ಸೇರಿದ ಜಮೀನಿನಲ್ಲಿ ಇಂಡಸ್ಟ್ರೀಯಲ್ ಸಬರ್ಬ್ ನಿರ್ಮಾಣಗೊಂಡಿದ್ದು, ಅಲ್ಲಿನ ಎರಡು ನಿವೇಶನಗಳಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಸ್ವತ್ತಿನಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದರು. ಸುಮಾರು 13,000 ಚದರ ಅಡಿಗಳ ಬೆಲೆಬಾಳುವ ಸ್ಚತ್ತನ್ನು ಪ್ರಾಧಿಕಾರದ ಕಾರ್ಯಪಡೆ ಸಿಬ್ಬಂದಿ ತೆರವುಗೊಳಿಸಿ ಮತ್ತೆ ಪ್ರಾಧಿಕಾರದ ಸುಪರ್ದಿಗೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಪ್ರಾಧಿಕಾರದ ವಲಯ ಆಯುಕ್ತರು, ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-1 ಹಾಗೂ ಪ್ರಾಧಿಕಾರದ ಕಾರ್ಯಪಡೆ, ಪಶ್ಚಿಮ ವಿಭಾಗದ ಅಭಿಯಂತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net