ತಮಗೆ ಪರಿಚಯವೇ ಇಲ್ಲದ ಕೆಲ ಸಮಾನ ಮನಸ್ಕರು ತಮಗಾಗಿ ಸೀಮಂತ ಮಾಡಿದ ಕೆಲಸವನ್ನು ನೋಡಿ, ಸೀರೆಯುಟ್ಟು, ಸಿಂಗಾರಗೊಂಡು ಬಂದಿದ್ದ ಬಡ ಮಹಿಳೆಯರು ಕಂಬನಿಯಾದರು. ಸೀಮಂತ ಮಾಡಿದ ಇನ್ಫಿವರ್ಲ್ಡ್ ಮತ್ತು ಇತರೆ ಸಂಘ-ಸಂಸ್ಥೆಗಳಿಗೆ ಧನ್ಯವಾದ ತಿಳಿಸಿದರು. ಈ ಕಾರ್ಯಕ್ರಮವು ಫಲಾನುಭವಿಗಳಿಗೆ ಸಂತೋಷ, ಘನತೆ ಹಾಗೂ ಸೇರಿದ ಭಾವನೆ ನೀಡಿದ್ದು, ನಿಜವಾಗಿಯೂ ಸ್ಮರಣೀಯ ಮತ್ತು ಪ್ರಭಾವಶಾಲಿ ಆಚರಣೆಯಾಗಿ ಮೂಡಿ ಬಂತೆಂದು ಎಂದು ಆಯೋಜಕರು ಸಂತಸ ವ್ಯಕ್ತಪಡಿಸಿದರು.