ಬೆಂಗಳೂರಿನಲ್ಲಿ 515 ಆರ್ಮಿ ಬೇಸ್​ ವರ್ಕ್​ಶಾಪ್​ನಿಂದ ತ್ರಿಪಕ್ಷೀಯ ಒಪ್ಪಂದ | army

ಆರ್ಮಿ ಬೇಸ್​ ವಕ್​ಶಾಪ್ ಒಪ್ಪಂದ
ಆರ್ಮಿ ಬೇಸ್​ ವಕ್​ಶಾಪ್ ಒಪ್ಪಂದ
Published on
ಬೆಂಗಳೂರು: ಭಾರತೀಯ ಸೇನೆಯ ಪ್ರಮುಖ ಘಟಕವಾದ 515 ಆರ್ಮಿ ಬೇಸ್​ ವರ್ಕ್​ಶಾಪ್​ (515 ಎಬಿಡಬ್ಲ್ಯು) ದೇಶೀಯ ಡ್ರೋನ್​ ತಯಾರಿಕೆ ಹಾಗೂ ತಂತ್ರಜ್ಞಾನ ಸಾಮರ್ಥ್ಯ ವೃದ್ಧಿಗೆ ಮಹತ್ವದ ಹೆಜ್ಜೆ ಇಟ್ಟಿದೆ. ರಕ್ಷಣಾ ಸಚಿವಾಲಯದ ಸಂಯೋಜಿತ ಮುಖ್ಯಸ್ಥಾಲಯ ಹಾಗೂ ಇಎಂಇ ನಿರ್ದೇಶನಾಲಯದ ಪರವಾಗಿ ಮೂರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಡ್ರೋನ್​ ಉತ್ಪಾದನಾ ಸಾಮರ್ಥ್ಯ ಬಲಪಡಿಸುವ ಉದ್ದೇಶದಿಂದ, ಬೆಂಗಳೂರಿನ ಸ್ಟಾರ್ಟ್​ಅಪ್​ "ನಾಟಿಕಲ್​ ವಿಂಗ್ಸ್​ ಏರೋಸ್ಪೇಸ್​' ಜತೆ ಒಪ್ಪಂದ ಮಾಡಿಕೊಂಡಿದ್ದು, ಇವು ವಿದ್ಯುತ್​ ಚಾಲಿತ ಪ್ರೋಪಲ್ಷನ್​ ವ್ಯವಸ್ಥೆ, ಬಿಎಲ್​ಡಿಸಿ ಮೋಟಾರ್​, ಪ್ರೊಪೆಲರ್​ ವಿನ್ಯಾಸ ಹಾಗೂ ಕಾಂಪೋಸಿಟ್​ ತಂತ್ರಜ್ಞಾನದಲ್ಲಿ ತಾಂತ್ರಿಕ ಮಾರ್ಗದರ್ಶನ ನೀಡಲಿದೆ. ಇದರಿಂದ ತಂತ್ರಜ್ಞರಿಗೆ ನವೀನ ತರಬೇತಿ ಲಭ್ಯವಾಗಲಿದೆ.
ಇನ್ನೊಂದು ಒಪ್ಪಂದವನ್ನು "ಯಾನೆಂದ್ರಿಯ ಪ್ರೈವೇಟ್​ ಲಿಮಿಟೆಡ್​' ಸಂಸ್ಥೆಯೊಂದಿಗೆ ಮಾಡಲಾಗಿದ್ದು, ಕೃತಕ ಬುದ್ಧಿಮತ್ತೆ ಆಧಾರಿತ ಫ್ಲೈಟ್​ ಕಂಟ್ರೋಲ್​ ಸಿಸ್ಟಮ್​, ಜಿಎನ್​ಎಸ್​ಎಸ್​ ನ್ಯಾವಿಗೇಶನ್​ ಹಾಗೂ ಗ್ರೌಂಡ್​ ಕಂಟ್ರೋಲ್​ ಸ್ಟೇಷನ್​ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಗೆ ನೆರವಾಗಲಿದೆ. ವಿದೇಶಿ ತಂತ್ರಜ್ಞಾನ ಅವಲಂಬನೆ ಕಡಿಮೆ ಮಾಡುವುದೆ ಇದರ ಉದ್ದೇಶವಾಗಿದೆ.
ಮೂರನೇ ಒಪ್ಪಂದವನ್ನು ಗಾಂಧಿನಗರದ ರಾಷ್ಟ್ರೀಯ ಫಾರೆನ್ಸಿಕ್​ ಸೈನ್ಸಸ್​ ವಿಶ್ವವಿದ್ಯಾಲಯದೊಂದಿಗೆ ಮಾಡಿಕೊಂಡಿದ್ದು, ಡ್ರೋನ್​ ಫಾರೆನ್ಸಿಕ್ಸ್​, ಸೈಬರ್​ ಭದ್ರತೆ ಹಾಗೂ ತಾಂತ್ರಿಕ ವಿಶ್ಲೇಷಣೆಗೆ ಸಹಕಾರ ನೀಡಲಿದೆ.
ಈ ಒಪ್ಪಂದಗಳ ಮೂಲಕ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ, ರಕ್ಷಣಾ ಕ್ಷೇತ್ರದಲ್ಲಿ ನವೋತ್ಸಾಹ ಹಾಗೂ ಆತ್ಮನಿರ್ಭರ ಭಾರತ ಗುರಿ ಸಾಧನೆಗೆ ಮಹತ್ವದ ಉತ್ತೇಜನ ಸಿಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net