ಡ್ರಗ್ಸ್‌ನಿಂದ ಯುವಕರ ರಕ್ಷಿಸಲು ಒಗ್ಗಟ್ಟಿನ ಹೋರಾಟ ಅಗತ್ಯ

ಗೃಹಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ, ರಾಷ್ಟ್ರೀಯ ಮೋಟಾರ್ ಸೈಕಲ್ rallyಗೆ ಚಾಲನೆ
ಡ್ರಗ್ಸ್‌ನಿಂದ ಯುವಕರ ರಕ್ಷಿಸಲು ಒಗ್ಗಟ್ಟಿನ ಹೋರಾಟ ಅಗತ್ಯ
Published on: 

ಬೆಂಗಳೂರು: ಮಾದಕವಸ್ತು ಸೇವನೆ ದುಶ್ಚಟದಿಂದ ಯುವಜನತೆಯನ್ನು ರಕ್ಷಿಸಲು ಇಡೀ ದೇಶವೇ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರಾಷ್ಟ್ರೀಯ ಏಕತಾ ದಿವಸ್- 2026 ಅಂಗವಾಗಿ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ ಗುರುವಾರ ರಾಜ್ಯ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಮೋಟಾರ್ ಸೈಕಲ್ ರ‌್ಯಾಲಿ- ಮಾದಕ ವಸ್ತುಗಳ ವಿರುದ್ಧ ಹೋರಾಟ’ಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾದಕ ದ್ರವ್ಯಗಳ ವಿರುದ್ಧದ ಹೋರಾಟವು ಕೇವಲ ಒಂದು ರಾಜ್ಯ ಅಥವಾ ಸರ್ಕಾರಕ್ಕೆ ಸೀಮಿತವಾದುದಲ್ಲ. ಈ ಹೋರಾಟದಲ್ಲಿ ಇಡೀ ದೇಶ ಒಂದಾಗಿ ನಿಂತು ಯುವಜನರ ಭವಿಷ್ಯ ರಕ್ಷಿಸಬೇಕಿದೆ ಎಂದರು.

ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಮಾದಕ ದ್ರವ್ಯಗಳ ವಿರುದ್ಧದ ಪೊಲೀಸ್ ಕಾರ್ಯಾಚರಣೆಯಲ್ಲಿ ಅಂದಾಜು 37 ಸಾವಿರ ಜನರನ್ನು ಬಂಧಿಸಲಾಗಿದ್ದು, ಒಟ್ಟು 10 ಸಾವಿರ ಜನರಿಗೆ ಶಿಕ್ಷೆಯಾಗಿದೆ. ಡ್ರಗ್ಸ್ ಸಮಸ್ಯೆ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗಿಲ್ಲ. ಗ್ರಾಮೀಣ ಭಾಗದಲ್ಲೂ ವೇಗವಾಗಿ ಹರಡುತ್ತಿದೆ. ಎಲ್ಲೆಡೆ ಹರಡಿರುವ ಪಿಡುಗನ್ನು ಬೇರುಸಮೇತ ಕಿತ್ತುಹಾಕಬೇಕಿದೆ ಎಂದು ಹೇಳಿದರು.

ಯುವಜನರಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು, ಮಾದಕ ದ್ರವ್ಯಗಳ ಕಳ್ಳಸಾಗಣೆ ಮತ್ತು ದುರುಪಯೋಗ ತಡೆಗಟ್ಟುವುದು ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ ಎಂದರು.

ಗುಜರಾತ್ rallyಗೆ 200 ಪೊಲೀಸ್ ಸಿಬ್ಬಂದಿ:

ರಾಜ್ಯದ 200 ಪೊಲೀಸ್ ಸಿಬ್ಬಂದಿ ಗುಜರಾತ್‌ನಲ್ಲಿ ಶುಕ್ರವಾರ (ಅ.16ರಂದು) ನಡೆಯಲಿರುವ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಇದರಲ್ಲಿ ರಾಜ್ಯ ಮೀಸಲು ಪಡೆ, ಬೆಂಗಳೂರು ನಗರ ಪೊಲೀಸ್, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಸೇರಿ ವಿವಿಧ ಪೊಲೀಸ್ ಘಟಕಗಳ ಸಿಬ್ಬಂದಿ ಹಾಗೂ ಬೈಕರ್ಸ್ ಯುನಿಟಿ ಕಾಲ್ಸ್ ಇಂಡಿಯಾದ ಸದಸ್ಯರು ರ‌್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಿಯಾಂಕ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net