ಬೆಂಗಳೂರು: ವಿಶಾಖಮಟ್ಟಣದಲ್ಲಿ ನಡೆದ 63ನೇ ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಬೆಂಗಳೂರಿನ ಎನ್. ಏಕಾಂಶ ಕುಮಾರ್ 1 ಚಿನ್ನ, 3 ಬೆಳ್ಳಿ, 1 ಕಂಚು ಸೇರಿ ಒಟ್ಟು 5 ಪದಕ ಪಡೆಯುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ. ಇವರು ಪ್ರಸ್ತುತ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಪ್ರತೀಕ್ ರಾಜ, ಕುಮಾರ್, ಶರತ್ ಹಾಗೂ ತೇಜು ಅವರಿಂದ ತರಬೇತಿ ಪಡೆದಿದ್ದಾರೆ.