ನೋಂದಣಿ ಅಧಿನಿಯಮ 1908ರ ಪ್ರಕರಣ 69ರ ಕರ್ನಾಟಕ ನೋಂದಣಿ ವಿಧೇಯಕಕ್ಕೆ ತಿದ್ದುಪಡಿ ತಂದು ಕಂದಾಯ ಇಲಾಖೆ ಡಿಸೆಂಬರ್ 22ಕ್ಕೆ ಜಾರಿಗೆ ತಂದಿದೆ. ನಿಯಮ 22ಬಿ ಪ್ರಕಾರ ರಿಜಿಸ್ಟ್ರೇಷನ್ ವೇಳೆ ಸಕ್ಷಮ ಪ್ರಾಧಿಕಾರವು ನಿರ್ವಹಿಸುವ ವಿದ್ಯುನ್ಮಾನ ದಾಖಲೆ ಮುಖಾಂತರ ನೋಂದಣಿ ಕಾವೇರಿ 2.0 ತಂತ್ರಾಂಶಕ್ಕೆ ಬರುವ ದತ್ತಾಂಶ ಪಡೆಯಬೇಕು. ಇಲ್ಲವಾದರೆ, ಸಬ್ ರಿಜಿಸ್ಟ್ರಾರ್‌ಗಳು ದಸ್ತಾವೇಜು ನೋಂದಣಿಯನ್ನು ನಿರಾಕರಿಸಬೇಕು. ಆದರೆ, ಸರ್ಜಾಪುರ ಸಬ್ ರಿಜಿಸ್ಟ್ರಾರ್ ನಿರಾಕರಿಸಿಲ್ಲ. ಬದಲಿಗೆ ಕ್ರಯ ಪತ್ರಗಳನ್ನು ನೋಂದಾವಣಿ ಮಾಡಿದ್ದು, ಇದರ ಆಧಾರದ ಮೇಲೆ ಜಿಲ್ಲಾ ನೋಂದಣಾಧಿಕಾರಿ, ತಿದ್ದುಪಡಿ ವಿಧೇಯಕದಲ್ಲಿ ನೀಡಿರುವ ಅಧಿಕಾರ ಬಳಸಿ ಸ್ವಯಂ ದೂರು ದಾಖಲಿಸಿಕೊಂಡು ಕ್ರಯ ಪತ್ರಗಳನ್ನು ರದ್ದುಮಾಡುವ ಅಧಿಕಾರ ಹೊಂದಿದ್ದಾರೆ.